ರಾಯಚೂರು: ಮಾನ್ಸೂನ್ ರಾಜ್ಯ ಪ್ರವೇಶಿಸಲು ಇನ್ನೂ ಒಂದು ವಾರಕ್ಕೂ ಹೆಚ್ಚು ಸಮಯ ಇರುವುದರಿಂದ ರಾಯಚೂರ ನಗರದಲ್ಲಿ ನಿನ್ನೆ ಧಾರಾಕಾರವಾಗಿ ಸುರಿದಿದ್ದು ಅಕಾಲಿಕ ಮಳೆಯೇ. ರಾಯಚೂರು ನಗರ ಭಾಗದಲ್ಲಿ ಮಳೆ ಇದ್ದಕ್ಕಿದ್ದಂತೆ ಸುರಿಯಲಾರಂಭಿಸಿದ್ದರಿಂದ ಜನರಿಗೆ ಬಚಾವಾಗಲು ಸಮಯ ಕೂಡ ಸಿಕ್ಕಿಲ್ಲ.
ಇಲ್ಲಿನ ವ್ಯವಸಾಯ ಉತ್ಪನ್ನ ಮಾರಾಟ ಮಳಿಗೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜನರು ಭತ್ತದ (ನೆಲ್ಲು) ಮೂಟೆಗಳನ್ನು ಮಾರಲು ತಂದಿಟ್ಟಿದ್ದಾರೆ. ಆದರೆ ಮಳೆಯ ನೀರು ಎಪಿಎಮ್ ಸಿ ಯಾರ್ಡ್ ಗೆ ನುಗ್ಗಿ ಭತ್ತದ ಚೀಲಗಳನ್ನು ತೊಯಿಸಿಬಿಟ್ಟಿದೆ. ನಷ್ಟ ಅನುಭವಿಸಿರುವ ರೈತರು ಕಂಗಾಲಾಗಿದ್ದಾರೆ.