ಬಾಗಲಕೋಟೆ: ಅಪ್ಪು ಸಮಾಧಿಗೆ ಭೇಟಿ ನೀಡಲು ಬಾಗಲಕೋಟೆ ಅಭಿಮಾನಿಯೊಬ್ಬ ಸೈಕಲ್ ಮೇಲೆ ಸವಾರಿ ಬೆಳೆಸಿದ್ದಾನೆ. ಪುನೀತ್ ಸಮಾಧಿ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಲು ಮುಂದಾಗಿರುವ ಅಭಿಮಾನಿ, ಸೈಕಲ್ ಯಾತ್ರೆ ಹಮ್ಮಿಕೊಂಡಿದ್ದಾನೆ. ಮೂಲತಃ ಬೀಳಗಿ ತಾಲೂಕಿನ ಬಾದರದಿನ್ನಿ ಗ್ರಾಮದ ರಾಘವೇಂದ್ರ ಗಾಣಿಗೇರ್ ಎಂಬ ವ್ಯಕ್ತಿಯೇ, ಯುವರತ್ನನ ಅಭಿಮಾನಿಯಾಗಿದ್ದು, ನಿನ್ನೆ ಬೀಳಗಿ ತಾಲೂಕಿನ ಬಾದರದಿನ್ನಿ ಗ್ರಾಮದಿಂದ ಆರಂಭಿಸಿದ್ದ ಸೈಕಲ್ ಯಾತ್ರೆ ಆರಂಭಿಸಿದ್ದಾನೆ.
ನಿನ್ನೆ ರಾತ್ರಿ ಹುನಗುಂದ ತಲುಪಿ ಅಲ್ಲಿ ವಾಸ್ತವ್ಯ ಹೂಡಿದ್ದ ರಾಘವೇಂದ್ರ, ಇವತ್ತು ಮುಂಜಾನೆ ಹುನಗುಂದ ಪಟ್ಟಣದಿಂದ ಸೈಕಲ್ ಯಾತ್ರೆ ಶುರು ಮಾಡಿಕೊಂಡಿದ್ದಾನೆ
ರಾಘವೇಂದ್ರ ಹುನಗುಂದ ತಲುಪುತ್ತಿದ್ದಂತೆ ಪಟ್ಡಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಪುನೀತ್ ಅಭಿಮಾನಿಗಳು ರಾಘವೇಂದ್ರಗೆ ಸನ್ಮಾನ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಬಾದರದಿನ್ನಿ ಗ್ರಾಮದಿಂದ ಬೆಂಗಳೂರು ವರೆಗೆ ೬೦೦ ಕಿ.ಮೀ ಸೈಕಲ್ ಯಾತ್ರೆ ಮಾಡಲು ನಿರ್ಧರಿಸಿರುವ ರಾಘವೇಂದ್ರ, ಕನ್ನಡಧ್ವಜ, ಸೈಕಲ್ ಹಿಂದೆ ಮುಂದೆ ಪುನೀತ್ ಭಾವಚಿತ್ರ ಕಟ್ಟಿಕೊಂಡು ಸೈಕಲ್ ಯಾತ್ರೆ ಹೊರಟಿದ್ದಾನೆ.
ಪುನೀತ್ ಸಮಾದಿಗೆ ತೆರಳಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ವಾಪಸ್ ಆಗಲಿದ್ದಾನೆ. ಪುನೀತ್ ಮೃತಪಟ್ಟ ದಿನವೇ ಹೋಗಬೇಕೆಂದುಕೊಂಡಿದ್ದ ಅಭಿಮಾನಿ, ಆರೋಗ್ಯ ಸರಿ ಇಲ್ಲದ ಕಾರಣ ಈಗ ಸೈಕಲ್ ಯಾತ್ರೆ ಹೊರಟಿರುವುದಾಗಿ ತಿಳಿಸಿದ್ದಾನೆ. ಹುನಗುಂದ, ಇಳಕಲ್, ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರಿನ ಪುನೀತ್ ಸಮಾಧಿ ವರೆಗೆ ರಾಘವೇಂದ್ರ ಸೈಕಲ್ ಯಾತ್ರೆ ಚಲಿಸಲಿದೆ.