ಬೆಳಗಾವಿ: ಕೇಂದ್ರ ಸರ್ಕಾರದಿಂದ ದೇಶದಲ್ಲಿ ನಿರಂತರವಾಗಿ ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆ ಆಗುತ್ತಿರುವುದನ್ನು ಖಂಡಿಸಿ, ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಬೃಹತ್ ಆಂದೋಲನದ ಭಾಗವಾಗಿ, ಶಾಸಕ ಗಣೇಶ್ ಹುಕ್ಕೇರಿ ನೇತೃತ್ವದಲ್ಲಿ ಇಂದು “ಸದಲಗಾ” ಪಟ್ಟಣದಲ್ಲಿ ‘100 ನಾಟ್ ಔಟ್’ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸದಲಗಾ ಪಟ್ಟಣದ ಅನೇಕ ಪೆಟ್ರೊಲ್ ಪಂಪ್ ಗಳಲ್ಲಿ ತೈಲ್ ಬೆಲೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ , ಭಿತ್ತಿ ಪತ್ರ ಹಿಡಿದುಕೊಂಡು ಘೋಷಣೆ ಕೂಗಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಗಣೇಶ್ ಹುಕ್ಕೇರಿ,
ಕಾಂಗ್ರೆಸ್ ಪಕ್ಷ ಶ್ರೀ ಸಾಮನ್ಯ ಜನರಿಗಾಗಿ ಇರುವ ಪಕ್ಷ. ಕೊರೊನಾ ಸಮಯದಲ್ಲಿ ಜನರ ಜೀವ ಮತ್ತು ಜೀವನ ಉಳಿಸುವ ಸಲುವಾಗಿ ನಾವು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದೆವೆ. ಪೆಟ್ರೋಲ್ ಡಿಸೈಲ್ ಬೆಲೆ ಎರಿಕೆ ಖಂಡಿಸಿ ಕೆ.ಪಿ.ಸಿ.ಸಿ ವತಿಯಿಂದ ಜಿಲ್ಲೆ, ತಾಲೂಕು, ಹಾಗೂ ಹೊಬಳಿ ಮಟ್ಟದಲ್ಲಿ ನಾವು ಈಗಾಗಲೇ ಹೋರಾಟ ಮಾಡಿದ್ದೂ ಮುಂದೆ ಗ್ರಾಮೀಣ ಪ್ರದೇಶದಲ್ಲೂ ನಾವು ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ತಿಳಿಸಿದರು. ಇನ್ನೂ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಜನರ ಜೀವ ಮತ್ತು ಜೀವನದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ನೀಜವಾಗಿಯೂ ಜನರ ಬಗ್ಗೆ ಕಾಳಜಿ ಇದ್ದಿದ್ರೆ, ಕೊರೊನಾದಿಂದ ಸಂಕಷ್ಟದಲ್ಲಿರುವ ಜನರಿಗಾಗಿ ತೈಲ್ ಬೆಲೆ ಕಡಿಮೆ ಮಾಡಬೇಕಿತ್ತು. ಆದ್ರೆ ಪೆಟ್ರೋಲ್- ಡಿಸೈಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಜಾಸ್ತಿ ಮಾಡುವುದರ ಮೂಲಕ, ಗಾಯದ ಮೇಲೆ ಬರೆ ಎಳೆಯುವಂತ ಕೆಲಸ ಸರ್ಕಾರ ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದ ಶಾಸಕ ಗಣೇಶ ಹುಕ್ಕೇರಿ. ಇಂದು ಅನೇಕ ಯುವಕರು ಉದ್ಯೋಗ ಕಳೆದುಕೊಂಡು ಕೃಷಿ ಕಡೆಗೆ ಮುಖ ಮಾಡಿದ್ದಾರೆ, ಇಂತಹ ಸಂದರ್ಭದಲ್ಲಿ , ರಸಗೊಬ್ಬರ ಸೇರಿದಂತೆ ಬೇಸಾಯ ಮಾಡಲು ಬೇಕಾಗಿರುವ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಿ, ಯುವಕರನ್ನು ಕೃಷಿ ಕಡೆಗೆ ಪ್ರೋತ್ಸಾಹ ನೀಡಬೇಕಿತ್ತು. ಆದ್ರೆ ರಸಗೊಬ್ಬರ ಬೆಲೆ ಜಾಸ್ತಿ ಮಾಡುವುದರ ಮೂಲಕ, ಕೃಷಿ ಬಗ್ಗೆ ಜನರಲ್ಲಿ ಆತಂಕ ಸೃಷ್ಟಿಸುವಂತಹ ಕೆಲಸ ಸರ್ಕಾರ ಮಾಡಿದೆ ಎಂದು ಶಾಸಕ ಗಣೇಶ್ ಹುಕ್ಕೇರಿಯವರು ವಾಗ್ದಾಳಿ ನಡೆಸಿದರು.ಕೇಂದ್ರ ಸರ್ಕಾರ ತೈಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಿ ಜನಸಾಮಾನ್ಯರನ್ನು ರಕ್ಷಿಸಬೇಕೆಂದು ಗಣೇಶ್ ಹುಕ್ಕೇರಿಯವರು ಒತ್ತಾಯ ಮಾಡಿದರು.ಈ ವೇಳೆ ಪಟ್ಟಣ ಪಂಚಾಯತಿ ಹಾಗೂ , ಪುರಸಭೆ ಸದಸ್ಯರು, ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗಿ ಆಗಿದ್ದರು.