ಕೂಗು ನಿಮ್ಮದು ಧ್ವನಿ ನಮ್ಮದು

ಸವದತ್ತಿಯಲ್ಲಿ ಕಾಂಗ್ರೆಸ್ ಮುಖಂಡ ವಿಶ್ವಾಸ ವೈದ್ಯ ನೇತೃತ್ವದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪ್ರೋಟೆಸ್ಟ್

ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಕೇಂದ್ರ ಬಿಜೆಪಿ ಸರ್ಕಾರ ಪೆಟ್ರೊಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಿರುವುದನ್ನು ಖಂಡಿಸಿ, #Petrol100NotOut ಎಂಬ ಹೆಸರಿನ ಆಂದೋಲನದ ಮೂಲಕ ಪ್ರತಿಭಟಿಸಲಾಯಿತು.ದೇಶದ ಬಡಜನರಿಗೆ ಅಚ್ಚೇ ದಿನ್ ಆಸೆ ತೋರಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅಗತ್ಯ ವಸ್ತುಗಳು, ಪೆಟ್ರೋಲ್, ಗ್ಯಾಸ್ ಬೆಲೆಯನ್ನು ಮನಸೋಯಿಚ್ಛೆ ಏರಿಸುವ ಮೂಲಕ ಕೊರೊನಾದಿಂದ ಕೈಸೋತು ಕುಳಿತಿರುವ ಜನಸಾಮಾನ್ಯರ ತಲೆಯ ಮೇಲೆ ಚಪ್ಪಡಿ ಎಳೆಯುತ್ತಿದೆ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ, ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡಿಸೇಲ್ ಬೆಲೆಗಳು ಬಡಜನರ ಕೈಗೆಟಕದಂತೆ ಬಿಜೆಪಿ ಸರ್ಕಾರ ಏರಿಕೆ ಮಾಡುತ್ತಿರುವುದು ಅನ್ಯಾಯ,ಈ ಬಿಜೆಪಿ ಸರ್ಕಾರಗಳಿಗೆ ದೇಶದ ಜನರ ಬಗ್ಗೆ ಕಿಂಚಿತ್ತಾದರೂ ಕಾಳಜಿ, ಕನಿಕರ ಇದ್ದರೆ, ಕೂಡಲೇ ಅಗತ್ಯ ವಸ್ತುಗಳ, ಕಾಳು ಕಡಿಗಳ, ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡಿಸೇಲ್ ಮುಂತಾದ ವಸ್ತುಗಳ ಬೆಲೆಗಳನ್ನು ತಕ್ಷಣವೇ ಇಳಿಸಲಿ ಎಂದು ಆಗ್ರಹಿಸುತ್ತೇನೆ.

ಈ ಸಂದರ್ಭದಲ್ಲಿ ಸವದತ್ತಿ ಕಾಂಗ್ರೆಸ್ ಮುಖಂಡ ಶ್ರೀ ವಿಶ್ವಾಸ್ ವೈದ್ಯ, ಜಿಲ್ಲಾ ಅಧ್ಯಕ್ಷ ವಿನಯ್ ನಾವಲಗಟ್ಟಿ, ಮಾಜಿ ಶಾಸಕ ಆರ್ ವಿ ಪಾಟಿಲ್, ಜಿಲ್ಲಾ ಪಂಚಾಯತ್ ಸದಸ್ಯ ಫಕ್ಕೀರಪ್ಪ ಹದ್ದನವರ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲು ಜಕಾತಿ, ಪುರಸಭೆ ಸದಸ್ಯ ಬಾಪೂ ಚುರಿಖಾನ್, MB ಸವದತ್ತಿ, ಮಾಜಿ ಪುರಸಭೆ ಸದಸ್ಯ ಚಂದ್ರಣ್ಣ ಶಾಮರಾಯನವರ, BN ಪ್ರಭುಣವರ್, ಮಲ್ಲಿಕಾರ್ಜುನ ಪೂರಗುಡಿ, ಬಸವರಾಜ್ ಗುರನ್ನವರ್, ಮಹಾರಾಜ್ ಗೌಡ ಪಾಟೀಲ, ಗಂಗಯ್ಯ ಅಮೋಘಿಮಠ, ಫಕ್ರುದ್ದೀನ್ ದೊಡಮನಿ, ಯೂಥ್ ಕಾಂಗ್ರೆಸ್ ಅಧ್ಯಕ್ಷ ಆಕೀಫ್ ಯಡ್ರಾಂವಿ, ಡಿಡಿ ಸಣ್ಣಕ್ಕಿ, ಹುಸೇನ್ ಮಲ್ದಾರ್, ಹಾಗೂ ಅನೇಕ ಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!