ಕೋಲಾರ: ಪಾಕ್ ಜಿಂದಾಬಾದ್ ಮತ್ತು ಬೆಂಗಳೂರು ಬಾಂಬ್ ಬ್ಲ್ಯಾಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಕೋಲಾರದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮುಸ್ಲಿಮರಿಂದಲೆ ಗೆದ್ದಿದ್ದೇವೆ ಅನ್ನೋ ಸೊಕ್ಕು, ಅಹಂಕಾರದಿಂದಲೆ ಅವರಿಗೇನ್ ಬೇಕಾದ್ರು ಮಾಡಿಕೊಳ್ಳಿ ಎನ್ನುತ್ತಿದ್ದಾರೆ. ಉದಾಹರಣೆಗೆ ಹಿಜಾಬ್ ಹಾಕಿಕೊಳ್ಳಿ ಎನ್ನುತ್ತಾರೆ. ಏನ್ ಹಾಕಿಕೊಳ್ಳಿ ಎಂದ್ರೂ, ಸುಪ್ರೀಂಕೋರ್ಟ್ ನಲ್ಲಿ ತೀರ್ಪೆ ಬಂದಿಲ್ಲ.
ಸಮಾನತೆ ಬಗ್ಗೆ ಮಾತನಾಡುವ ನೀವು ಹಿಜಾಬ್ ಹಾಕಿಕೊಂಡಾಗ ಸಮಾನತೆ ಎಲ್ಲಿ ಬರುತ್ತೆ. ಹುಬ್ಬಳ್ಳಿಯಲ್ಲಿ 10 ಸಾವಿರ ಕೋಟಿ ಮುಸ್ಲಿಂ ಅಭಿವೃದ್ದಿಗೆ ಕೊಟ್ಟಿದ್ದೀನಿ ಎಂದು ಹೇಳುವ ನೀವು, ಮುಸ್ಲಿಂಮರಿಗರ ಕುಮ್ಮುಕ್ಕು ಸಿಗುತ್ತಿರುವುದರಿಂದ ವಿಧಾನಾಸೌಧ ಒಳಗೆ ಪಾಕಿಸ್ತಾನ ಜಿಂದಾಬಾದ್ ಎನ್ನುವ ಸೊಕ್ಕು ಕಿಡಿಗೇಡಿಗಳಿಗೆ ಬಂದಿದೆ ಎಂದು ಸರ್ಕಾರದ ವಿರುದ್ದ ಹಿಗ್ಗಾಮುಗ್ಗಾ ಕಿಡಿಕಾರಿದ್ದಾರೆ.
ಅವರನ್ನ ಬಂಧಿಸಬಾರದು ಗುಂಡಿಕ್ಕಿ ಕೊಲ್ಲಬೇಕು. ಅದು ದೇಶದ್ರೋಹಿ ಕ್ಯಾನ್ಸರ್. ಅದಕ್ಕೆ ಔಷಧ ಇಲ್ಲ, ಮುಲಾಮಿಲ್ಲ. ಅದನ್ನು ಆಪರೇಷನ್ ಮಾಡಬೇಕು, ಇಲ್ಲವಾದಲ್ಲಿ ದೇಶದ ತುಂಬ ಹರಡುತ್ತೆ. ಬಾಂಬ್ ಸ್ಪೋಟ ಪೂರ್ವ ಯೋಜಿತವಾಗಿದೆ. ಬಾಂಬ್ ತಯಾರಿ ಮಾಡಿರುವುದರ ಹಿಂದೆ ವ್ಯಕ್ತಿ ಅಲ್ಲ ಒಂದು ತಂಡ, ಸಂಘಟನೆ ಇದೆ ಎಂದ ಮುತಾಲಿಕ್, ಸರ್ಕಾರ ಹಾಗೂ ವಿರೋಧ ಪಕ್ಷದವರು ಬಾಯಿ ಮುಚ್ಚಿಕೊಂಡಿರಿ. ಪೊಲೀಸನವರು 24 ಗಂಟೆಯಲ್ಲಿ ಬಂಧಿಸಲಿದ್ದಾರೆ ಎಂದರು. ಎಫ್ ಎಸ್ ಎಲ್ ವರದಿ ತಿರುಚಲಾಗುವುದಿಲ್ಲ. ಮಾದ್ಯಮದವರಿಗೆ ಸಿಕ್ಕ ಹಾಗೂ ಖಾಸಗಿ ಎಫ್ ಎಸ್ ಎಲ್ ಗೆ ಕೊಟ್ರೆ ಇವರ ಸತ್ಯಾಂಶ ಹೊರ ಬರಲಿದೆ ಎಂದರು.
ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಮೋದಿ ಗೆಲ್ಲಿಸಿ ದೇಶ ಉಳಿಸಿ ಅನ್ನೋ ಅಭಿಯಾನ ರಾಜ್ಯದಲ್ಲಿ ಕೈಗೊಂಡಿದ್ದೇನೆ. ಹಾಗಾಗಿ ಇಂದು ಕೋಲಾರದಲ್ಲಿ ಅಭಿಯಾನ ಮಾಡಲಿದ್ದೇನೆ ಎಂದ ಪ್ರಮೋದ್ ಮುತಾಲಿಕ್, ಸರ್ಕಾರ ಮುಜರಾಯಿ ಅರ್ಚಕರಿಗೆ 5 ಸಾವಿರ ಕೊಡುತ್ತಿದೆ. ಆದ್ರೆ ಅದೇ ಮೌಲ್ವಿಗೆ 1 ಲಕ್ಷ ರೂಪಾಯಿ ಕೊಡಲಾಗುತ್ತಿದೆ. ಯಾಕೆ ಈ ಸರ್ಕಾರಗಳು ತಾರತಮ್ಯ ಮಾಡುತ್ತಿದೆ. ಮುಸ್ಲಿಂ ತುಷ್ಠಿಕರಣದಿಂದ ಹೀಗೆ ಸರ್ಕಾರ ಓಲೈಕೆಗೆ ಮುಂದಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ್ರು.
ಇನ್ನೂ ಕೋಲಾರ ಬಸ್ ನಿಲ್ದಾಣದ ಮಾರುತಿ ದೇವಸ್ಥಾನ ಪುನರುಜ್ಜೀವನ ಮಾಡಲಾಗಿಲ್ಲ ಎಂದ್ರೆ ಕೋಲಾರದ ರಾಮ ಭಕ್ತರೆ ದೇವಾಲಯವನ್ನು ಅಭಿವೃದ್ದಿ ಮಾಡಲಿದ್ದಾರೆ ಎಂದು ಕೋಲಾರದ ಹೊಸ ಬಸ್ ನಿಲ್ದಾಣದಲ್ಲಿರುವ ಆಂಜನೇಯ ದೇವಾಲಯದ ಬಳಿ ಪ್ರಮೋದ್ ಮುತಾಲಿಕ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ರು.