ನವದೆಹಲಿ: ಬುಧವಾರ ರಾಜ್ಯ ಸಭೆಯಲ್ಲಿ ಭಾರಿ ಹೈಡ್ರಾಮಾ ನಡೆದಿತ್ತು. ಇದೆ ವೇಳೆಯಲ್ಲಿ ಕಾಂಗ್ರೆಸ್ ಸಂಸದರು ಮಹಿಳಾ ಮಾರ್ಷಲ್ಗಳ ಮೇಲೆ ಕೈ ಮಾಡಿರುವ ದೃಶ್ಯ ಈಗ ಬಿಡುಗಡೆಯಾಗಿದೆ. ನಿನ್ನೆ ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳ ಖಾಸಗೀಕರಣಕ್ಕೆ ಅನುಕೂಲ ಮಾಡಿಕೊಡುವ ದಿ ಜನರಲ್ ಇನ್ಶುರೆನ್ಸ್ ಬಿಸಿನೆಸ್ ಬಿಲ್ ಗೆ ಗದ್ದಲದ ನಡುವೆ ಕೇಂದ್ರ ಅನುಮೋದನೆ ಪಡೆದುಕೊಂಡಿತ್ತು.
TMC, DMK ಎಡ ಪಕ್ಷಗಳು ತೀವ್ರವಾಗಿ ವಿರೋಧಿಸಿದ್ದವು. ಈ ಹಂತದಲ್ಲಿ ಮತ್ತೆ ಮೇಜಿನ ಮೆಲೆ ಹತ್ತಲು ಹೋದ ವಿಪಕ್ಷಗಳನ್ನು ತಡೆಯಲು ಮಾರ್ಷಲ್ಗಳು ಮುಂದಾಗಿದ್ರು. ಈ ಸಮಯದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ವಿಪಕ್ಷ ಕಾಂಗ್ರೆಸ್ನ ಮಹಿಳಾ ಸದಸ್ಯರು, ಮಹಿಳಾ ಮಾರ್ಷಲ್ಗಳ ಮೇಲೆಯೇ ಹಲ್ಲೆ ನಡೆಸುತ್ತಿದ್ದರು.
ಈ ಘಟನೆಯಲ್ಲಿ ೨ ಮಾರ್ಷಲ್ಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ೧ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇನ್ನೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಪ್ರಜಾಪ್ರಭುತ್ವದ ಅಣಕ. ಇಂತಹ ದೃಶ್ಯ ಎಲ್ಲೂ ಕಂಡಿರಲಿಲ್ಲ. ಇದು ಕರಾಳ ದಿನ. ವಿಪಕ್ಷಗಳಿಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದ್ರು.
ನಿನ್ನೆ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತದ ಇತಿಹಾಸದಲ್ಲಿ ಇದು ಪ್ರಥಮ ರಾಜ್ಯಸಭಾ ಸದಸ್ಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿದ್ರು.
ತದನಂತರದ ಪವಾರ್ ಪ್ರತಿಕ್ರಿಯಿಸಿ, ಮಹಿಳಾ ಸದಸ್ಯರ ಮೇಲೆ ಹಲ್ಲೆ ನಡೆಸಲಾಗಿದೆ. ಸದಸ್ಯರನ್ನು ನಿಯಂತ್ರಣ ಮಾಡಲು ಹೊರಗಡೆ ಇಂದ ೪೦ಕ್ಕೂ ಹೆಚ್ಚು ಮಾರ್ಷಲ್ಗಳು ಬಂದಿದ್ರು ಎಂದು ಹೇಳಿದ್ದಾರೆ.