ಬೆಳಗಾವಿ: ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಜಯಭೇರಿ ಭಾರಿಸುತ್ತಿದ್ದಂತೆ ಹಿರಿಯ ರಾಜಕಾರಣಿ ಪ್ರಕಾಶ ಹುಕ್ಕೇರಿಯವ್ರು ಮದವೇರಿದ ಆನೆಯಂತೆ ವರ್ತಿಸಿದ್ದಾರೆ. ಪೋಲಿಸ್ ಹಿರಿಯ ಅಧಿಕಾರಿಗೆ ಹಲ್ಲು ಮುರಿಯುತ್ತೇನೆ ಎಂದು ಆವಾಜ್ ಹಾಕುವ ಮೂಲಕ ಸಭ್ಯತೆ ಮೀರಿ ವರ್ತಿಸಿರೋದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮತ ಎಣಿಕೆ ಕೇಂದ್ರಕ್ಕೆ ಪ್ರಮಾಣ ಪತ್ರ ಸ್ವೀಕರಿಸಲು ಹಿಂಡು ಕಟ್ಟಿಕೊಂಡು ಹೊರಟಿದ್ದ ಪ್ರಕಾಶ ಹುಕ್ಕೇರಿಯವರನ್ನ ಎಸಿಪಿ ಸದಾಶಿವ ಕಟ್ಟಿಮನಿ ತಡೆದು, ಪ್ರಾದೇಶಿಕ ಆಯುಕ್ತರು ಅಭ್ಯರ್ಥಿ ಹಾಗೂ ಪಾಸ್ ಇದ್ದವರನ್ನ ಮಾತ್ರ ಬಿಡಲು ಹೇಳಿದ್ದಾರೆ ಎಂದು ತಡೆಯೊಡ್ಡಿದ್ದಕ್ಕೆ ಮಾಧ್ಯಮಗಳ ಎದುರೇ ಪ್ರಕಾಶ ಹುಕ್ಕೇರಿ, ಎಸಿಪಿ ಮಟ್ಟದ ಅಧಿಕಾರಿಗೆ ಅವಾಚ್ಯ ಶಬ್ದ ಬಳಸಿದ್ದು ಎಷ್ಟರ ಮಟ್ಟಿಗೆ ಸರಿ, ಹಿರಿಯ ರಾಜಕಾರಣಿ ಪ್ರಕಾಶ ಹುಕ್ಕೇರಿಗೆ ಗೆದ್ದ ಕೂಡಲೇ ದುರಹಂಕಾರ ಹೆಚ್ಚಾಯ್ತಾ ಎಂಬ ಚರ್ಚೆಗಳು ಜೋರಾಗಿವೆ.
ಒಬ್ಬ ಹಿರಿಯ ಪೋಲಿಸ್ ಅಧಿಕಾರಿಗೆ ಬಹಿರಂಗವಾಗಿ ನಿಂದಿಸಿದ್ರು ಬೆಳಗಾವಿ ಪೋಲಿಸ್ ಆಯುಕ್ತರು ಮಾತ್ರ ತುಟಿ ಬಿಚ್ಚದೇ ಇರೋದು ಪೋಲಿಸರ ಆತ್ಮಸ್ಥೈರ್ಯ ಕಡಿಮೆ ಮಾಡಿದ್ದಂತು ಸುಳ್ಳಲ್ಲ