ಧಾರವಾಡ: ಉಪಚುನಾವಣೆ ಇದ್ದಾಗ ಸರ್ಕಾರ ಹಾಗೂ ಸರ್ಕಾರದ ಮಂತ್ರಿಗಳು ನಿಲ್ಲುವುದು ಸಹಜ, ಹಿಂದೆ ನಂಜನಗೂಡು ಮತ್ತು ಗುಂಡ್ಲುಪೇಟೆ ಚುನಾವಣೆ ನಡೆದಾಗ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಅಲ್ಲೇ ಟೆಂಟ್ ಹೊಡೆಡಿದ್ರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ರು. ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡುತ್ತಾ, ಮುಖ್ಯಮಂತ್ರಿ ಯಾರು ಇರ್ತಾರೆ ಅವರು ಉಪಚುನಾವಣೆ ಗೆಲ್ಲಿಸಲು ನಿಲ್ಲುವುದು ಸಹಜ ಎಂದ್ರು.
೨ ಕ್ಷೇತ್ರಗಳ ಒಟ್ಟು ಮತಗಳ ಸರಾಸರಿ ನೋಡಿದ್ರೆ ೫೩ ರಷ್ಟು ಮತ ಬಿಜೆಪಿಗೆ ಬಿದ್ದಿವೆ. ಡಿಪಾಸಿಟ್ ಕಳೆದುಕೊಂಡಿದ್ರೆ ರೂಟ್ ಔಟ್, ನಮಗೂ ೭೬ ಸಾವಿರ ವೋಟು ಹಾಕಿದ್ದಾರೆ ಎಂದ್ರು. ಸೋಲು ಅಂದ್ರೆ ವಿರೋಧ ಪಕ್ಷದ ಮಾನ್ಯತೆ ಪಡೆಯಲಿಕ್ಕೂ ವಿಫಲರಾಗಿದ್ದು ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ ಪ್ರಲ್ಹಾದ್ ಜೋಶಿ, ಹಾನಗಲ್ನಲ್ಲಿ ಅವರಿಗೆ ೪ ಸಾವಿರ ಹೆಚ್ಚು ಮತ ಬಿದ್ದಿವೆ, ಸಿಂದಗಿಯಲ್ಲಿ ಅವರ ಸ್ಥಿತಿ ಏನಾಗಿದೆ, ೩೦ ಸಾವಿರಕ್ಕೂ ಹೆಚ್ಚು ಮತಗಳಿಂದ ಸೋತಿದ್ದಾರೆ ಎಂದು ಹೇಳಿದ್ರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಂದಗಿಯಲ್ಲೇ ಟೆಂಟ್ ಹೊಡೆದಿದ್ರು. ಒಟ್ಟಿನಲ್ಲಿ ಗೆದ್ದ ಬಳಿಕ ನಾವು ಭರೀ ಬೀಗಬಾರದು, ಸೋತ ನಂತರ ಧೃತಿಗೆಡಬಾರದು ಎಂದು ಜೋಶಿ ಹೇಳಿದ್ರು.