ಕೂಗು ನಿಮ್ಮದು ಧ್ವನಿ ನಮ್ಮದು

ಮಣ್ಣಿನಿಂದ ಮಾಡಿದ ಈ 6 ವಸ್ತುಗಳನ್ನು ಮನೆಗೆ ತನ್ನಿ, ಲಕ್ಷ್ಮಿಯ ಕೃಪೆಯಿಂದ ಸಂತೋಷ – ಸಂಪತ್ತು ವೃದ್ಧಿ!

ಮಣ್ಣಿನ ವಿಗ್ರಹ : ಮನೆಯಲ್ಲಿ ಮಣ್ಣಿನಿಂದ ಮಾಡಿದ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿ ಮಣ್ಣಿನಿಂದ ಮಾಡಿದ ಗಣೇಶ, ಲಕ್ಷ್ಮಿ ಮೂರ್ತಿ ಇಡಿ. ಇದರಿಂದ ಲಕ್ಷ್ಮಿ ದೇವಿ ಸಂತುಷ್ಟಳಾಗುತ್ತಾಳೆ.

ಮಣ್ಣಿನ ಕಳಸ : ಶಾಸ್ತ್ರಗಳಲ್ಲಿ, ಪೂಜೆಯ ಸಮಯದಲ್ಲಿ ಮಣ್ಣಿನ ಕಳಸವನ್ನು ಬಳಸುವುದು ಮಂಗಳಕರವೆಂದು ಹೇಳಲಾಗಿದೆ. 1 ರೂಪಾಯಿಯ ನಾಣ್ಯವನ್ನು ಮಣ್ಣಿನ ಪಾತ್ರೆಯಲ್ಲಿ ಹಾಕಿ ಪೂಜಾ ಮನೆಯಲ್ಲಿ ಇಡಿ ಎಂದು ಹೇಳಲಾಗುತ್ತದೆ. ಇದರಿಂದ ಐಶ್ವರ್ಯ ಹೆಚ್ಚುತ್ತದೆ.

ಮಣ್ಣಿನ ಮಡಕೆ: ನೀರನ್ನು ತಂಪು ಮಾಡಲು ಮಣ್ಣಿನ ಮಡಕೆಯನ್ನು ಬಳಸಬೇಕೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅದರಲ್ಲಿ ನೀರು ತುಂಬಿಸಿ ಉತ್ತರ ದಿಕ್ಕಿಗೆ ಇಡುವುದು ಶುಭಕರ. ನೀರು ಲಕ್ಷ್ಮಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಕೃಪಗೆ ಪಾತ್ರರಾಗುವಿರಿ.

ಮಣ್ಣಿನ ಹಣತೆ: ಸಂಜೆ ತುಳಸಿ ಗಿಡದ ಬಳಿ ದೀಪವನ್ನು ಹಚ್ಚುವುದು ಶುಭವೆಂದು ನಂಬಲಾಗಿದೆ. ಮಣ್ಣಿನ ಹಣತೆಯನ್ನು ಪಂಚತತ್ವದ ಸಂಕೇತವೆಂದು ಪರಿಗಣಿಸಲಾಗಿದೆ. ಇರದಲ್ಲಿ ದೀಪ ಹಚ್ಚುವುದರಿಂದ ದಾಂಪತ್ಯ ಜೀವನದಲ್ಲಿ ಮಧುರತೆ ಮೂಡುತ್ತದೆ.

ಮಣ್ಣಿನ ಆಟಿಕೆ: ಡ್ರಾಯಿಂಗ್ ರೂಮಿನಲ್ಲಿ ಮಣ್ಣಿನ ಆಟಿಕೆಗಳು ಅಥವಾ ಮಣ್ಣಿನ ವಸ್ತುಗಳನ್ನು ಇಡುವುದರಿಂದ ಧನಾಗಮನ ಹೆಚ್ಚಾಗುತ್ತದೆ. ಇದು ಧನಾತ್ಮಕ ಶಕ್ತಿಯನ್ನು ಸಹ ಸೃಷ್ಟಿಸುತ್ತದೆ.

error: Content is protected !!