ಬೆಂಗಳೂರು: ಸ್ಯಾಂಡಲ್ವುಡ್ ನಟಿ ಪಾರುಲ್ ಯಾದವ್ ಹಾಟ್ ಫೋಟೋಶೂಟ್ ಮಾಡಿಸಿದ್ದು ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ. ಇನ್ನೂ ಪಾರುಲ್ ಯಾದವ್ ಫೋಟೋಗಳನ್ನು ನೋಡಿದ ಅಭಿಮಾನಿಗಳು ಪುಲ್ ಫಿದಾ ಆಗಿದ್ದಾರೆ. ಜೊತೆಗೆ ಬಣ್ಣ ಬಣ್ಣದ ಫೋಟೋ ಶೂಟ್ಗಳ ಮೂಲಕ ಅವರು ಅವಾಗ ಅವಾಗ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಇನ್ನೂ ಇತ್ತೀಚೆಗಷ್ಟೆ ಪಾರುಲ್ ಯಾದವ್ ಮಾಡಿಸಿರುವ ಹೊಸ ಫೋಟೋ ಶೂಟ್ ಕೂಡ ಎಲ್ಲರ ಗಮನ ಸೇಳೆದಿದೆ. ಜೊತೆಗೆ ಗ್ಲಾಮರಸ್ ಲುಕ್ನಲ್ಲಿ ಪಾರುಲ್ ಯಾದವ್ ಪುಲ್ ಮಿಂಚುತಿದ್ದಾರೆ. ಇನ್ನೂ ತಿಳಿ ನೀಲಿ ಬಣ್ಣದ ಬಟ್ಟೆಯನ್ನು ಧರಿಸಿ, ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ.
ಇನ್ನೂ ನಟಿ ಪಾರುಲ್ ಯಾದವ್ ಅವರಿಗೆ ಬಹುಭಾಷೆಯಲ್ಲಿ ಸಿಕ್ಕಾ ಪಟ್ಟೆ ಅಭಿಮಾನಿಗಳಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಅಧಿಕ ಸಿನಿಮಾಗಳನ್ನು ಮಾಡಿದ ಅವರು ಮೂಲತಃ ಮುಂಬೈನವರು. ಇನ್ನೂ ಕಿಚ್ಚ ಸುದೀಪ್, ಉಪೇಂದ್ರ, ಚಿರಂಜೀವಿ ಸರ್ಜಾ, ದುನಿಯಾ ವಿಜಯ್, ನವರಸ ನಾಯಕ ಜಗ್ಗೇಶ್ ಇನ್ನೂ ಮುಂತಾದ ಸ್ಟಾರ್ ನಟರೊಂದಿಗೆ ನಟನೆ ಮಾಡುವ ಚಾನ್ಸ್ ಅವರಿಗೆ ಸಿಕ್ಕಿತ್ತು. ೨೦೦೦ ರಲ್ಲಿ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾ ಆಯ್ಕೆ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಹಾಗಂತ ಅವರು ತಮ್ಮ ಫ್ಯಾನ್ಸಗಳಿಂದ ದೂರ ಇಲ್ಲ. ಮತ್ತು ಸೋಷಿಯಲ್ ಮೀಡಿಯಾದ ಮೂಕಾಂತರ ಅಭಿಮಾನಿಗಳ ಜೊತೆಗೆ ಪಾರುಲ್ ಯಾದವ್ ಸದಾ ಸಂಪರ್ಕದಲ್ಲಿ ಇರುತ್ತಾರೆ. ಇನ್ನೂ ೨೦೧೮ ರ ನಂತರ ಪಾರುಲ್ ಯಾದವ್ ಅವರು ಯಾವುದೇ ಚಿತ್ರಗಳಲ್ಲೂ ಕಾಣಿಸಿಕೊಂಡಿಲ್ಲ. ಜೊತೆಗೆ ಹೊಸ ಚಿತ್ರದ ಮೂಲಕವಾಗಿ ಮತ್ತೆ ಪರದೆ ಮೇಲೆ ಬರುತ್ತೇನೆ ಎಂದು ಹೇಳಿದ್ದಾರೆ.