ತುಮಕೂರು: ಗಿಣಿ ಹುಡುಕಿ ಕೊಟ್ಟವರಿಗೆ ಎಂಬತ್ತು ಸಾವಿರ ಬಹುಮಾನ ನೀಡಿ ಹುಬ್ಬೇರುವಂತೆ ಮಾಡಿದ್ದ ದಂಪತಿ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ತುಮಕೂರಿನ ಅರ್ಜುನ್ ಸಂಜನಾ ದಂಪತಿ ರುಸ್ತುಮಾ ಮತ್ತು ರೋಜಾ ಹೆಸರಿನ ಎರಡು ಗಿಣಿಗಳನ್ನು ಸಾಕಿದ್ದರು. ಆದರೆ ಕಳೆದ ಕೆಲ ದಿನದ ಹಿಂದೆಯೇ ರುಸ್ತುಮಾ ಹೆಸರಿನ ಗಿಣಿ ಕಳೆದು ಹೋಗಿತ್ತು. ಗಿಳಿ ಮರಳಿ ಪಡೆಯಲು ಅರ್ಜುನ್ ಹರಸಾಹಸ ಪಟ್ಟಿದ್ದು, ಗಿಳಿ ಹುಡುಕಿಕೊಟ್ಟವರಿಗೆ ಭರ್ಜರಿ ಬಹುಮಾನ ಘೋಷಿಸಿದ್ದರು. ಬಳಿಕ ಕೊಟ್ಟ ಮಾತಿನಂತೆ ಗಿಣಿ ಹುಡುಕಿಕೊಟ್ಟ ಕುಟುಂಬಕ್ಕೆ ಅರ್ಜುನ್ ದಂಪತಿ ಎಂಬತ್ತು ಸಾವಿರ ರೂಪಾಯಿ ಬಹುಮಾನ ನೀಡಿದ್ದರು.
ಇದೀಗ ಗಿಣಿ ಮತ್ತೆ ತಪ್ಪಿಸಿಕೊಳ್ಳಬಹುದು ಎಂಬ ಭಯದಿಂದ ಅರ್ಜುನ್ ದಂಪತಿ, ಬೇಸರದಲ್ಲೇ ಗಿಣಿಗಳನ್ನು ಸರ್ದಾರ್ ವಲ್ಲಬಾಯ್ ಪಟೇಲ್ ಮೃಗಾಲಯಕ್ಕೆ ಹಸ್ತಾಂತರಿಸಿದ್ದಾರೆ. ಇನ್ನು ಅರ್ಜುನ್ ಪತ್ನಿ ಸಂಜನಾ ಗಿಳಿಗಳ ನೆನಪಿಗಾಗಿ ಎರಡು ಪುಕ್ಕಗಳಲ್ಲಿ ಕಿವಿ ಓಲೆ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ