ಕೂಗು ನಿಮ್ಮದು ಧ್ವನಿ ನಮ್ಮದು

ಜಿಂಕೆ, ಕಡವೆಗಳ ತಲೆಬುರುಡೆ, ಕೊಂಬುಗಳ ಮಾರಾಟ ಯತ್ನ: ಮೂವರು ಆರೋಪಿಗಳ ಬಂಧನ

ಚಾಮರಾಜನರ: ಜಿಂಕೆ ಹಾಗೂ ಕಡವೆಗಳ ಬುರುಡೆ ಮತ್ತು ಕೊಂಬುಗಳನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಮೂವರನ್ನು ಬಂಧಿಸುವಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಯಶಸ್ವಿಯಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಸಿಐಡಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಜಿಂಕೆ ಮತ್ತು ಕಡವೆ ಕೊಂಬುಗಳ ಸಾಗಾಣಿಕೆ ಕುರಿತು ಖಚಿತ ಮಾಹಿತಿ ಪಡೆದು ದಾಳಿ ಮಾಡಿದ ಸಿಐಡಿ ಪೊಲೀಸರು ಮಾಲು ಸಮೇತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. 26 ವರ್ಷದ ಜಡೆಯ@ಸ್ವಾಮಿ, 35 ವರ್ಷದ ಶಿವಮಲ್ಲು ಹಾಗೂ 35 ವರ್ಷದ ಶಿವಣ್ಣ ಬಂಧಿತ ಆರೋಪಿಗಳು. ಮೂವರು ಸಹ ಚಿಕ್ಕಲ್ಲೂರು ಸಮೀಪದ ರಾಚಪ್ಪಾಜಿ ನಗರದ ನಿವಾಸಿಗಳು.

ಇವರಿಂದ ಎರಡು ತಲೆ ಮೂಳೆ ಸಹಿತ ಕಡವೆ ಕೊಂಬುಗಳು, ಒಂದು ಕಡವೆ ಕೊಂಬು ಹಾಗೂ ಮೂರು ಜಿಂಕೆಗಳ ಕೊಂಬುಗಳು ಮತ್ತು ಇದರ ಸಾಗಾಣಿಕೆಗೆ ಬಳಸಿದ್ದ ಬಜಾಜ್ ಡಿಸ್ಕವರ್ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ‌. ಆರೋಪಿಗಳು ಅಕ್ರಮವಾಗಿ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಅದರ ಕೊಂಬುಗಳನ್ನು ಬೇರ್ಪಡಿಸಿ ಅವುಗಳನ್ನು ಮಾರಾಟ ಮಾಡಿ ಅಡ್ಡ ದಾರಿಯಲ್ಲಿ ಹಣ ಸಂಪಾದಿಸುವ ಇರಾದೆಯಲ್ಲಿದ್ರು. ಅಂತೆಯೇ ಚಿಕ್ಕಲ್ಲೂರಿನ ಜಾತ್ರೆ ಮೈದಾನಕ್ಕೆ ಮಾಲು ತಂದು ಸಾಗಾಣಿಕೆಗೆ ತಯಾರಿ ನಡೆಸಿದ್ರು.

ಈ ಬಗ್ಗೆ ಮಾಹಿತಿ ಪಡೆದ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಬ್‌ ಇನ್ಸ್‌ಪೆಕ್ಟರ್ ಮುದ್ದಮಾದೇವ ತಮ್ಮ‌ ಸಿಬ್ಬಂದಿಗಳೊಡನೆ ದಾಳಿ ನಡೆಸಿ ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ. ಬಳಿಕ ಆರೋಪಿಗಳ ವಿರುದ್ಧ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ‌. ದಾಳಿಯಲ್ಲಿ ಹೆಡ್ ಕಾನ್ಸ್‌ಟೇಬಲ್ ಗಳಾದ ಲೋಕೇಶ್, ಸ್ವಾಮಿ, ಬಸವರಾಜು, ತಖೀಉಲ್ಲಾ, ಶಂಕರ್, ಕುಮಾರಸ್ವಾಮಿ ಹಾಗೂ ಜೀಪ್ ಚಾಲಕ ಜಾಫರ್ ಪಾಲ್ಗೊಂಡಿದ್ರು.

error: Content is protected !!