ಕೂಗು ನಿಮ್ಮದು ಧ್ವನಿ ನಮ್ಮದು

ಒಡಿಶಾ ರೈಲು ಅಪಘಾತದಲ್ಲಿ ಮೃತಪಟ್ಟವರನ್ನು ಗುರುತಿಸುವಂತೆ ಭಾರತೀಯ ರೈಲ್ವೆ ಮನವಿ

ಒಡಿಶಾದ ಬಹನಾಗಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಸಂಬಂಧಿಕರು ಎಲ್ಲಿದ್ದಾರೆ ಎಂದು ಪತ್ತೆ ಹಚ್ಚಲು ಕುಟುಂಬಗಳಿಗೆ ಅನುಕೂಲವಾಗುವಂತೆ, ಒಡಿಶಾ ಸರ್ಕಾರದ ಬೆಂಬಲದೊಂದಿಗೆ ಭಾರತೀಯ ರೈಲ್ವೆ ಪತ್ತೆಹಚ್ಚಲು ಬೇಕಾಗಿರುವ ಕ್ರಮ ಕೈಗೊಂಡಿದೆ. ಈ ರೈಲು ಅಪಘಾತದಲ್ಲಿ ಪ್ರಯಾಣಿಕರ ಕುಟುಂಬ ಸದಸ್ಯರು/ಸಂಬಂಧಿಗಳು/ಸ್ನೇಹಿತರು ಮತ್ತು ಹಿತೈಷಿಗಳು ಈ ಕೆಳಗಿನ ವಿವರಗಳನ್ನು ಬಳಸಿಕೊಂಡು ಮೃತರ ಫೋಟೋಗಳು, ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಪ್ರಯಾಣಿಕರ ಪಟ್ಟಿಗಳು ಮತ್ತು ಗುರುತಿಸಲಾಗದ ವ್ಯಕ್ತಿಗಳ ಮಾಹಿತಿ ಬಳಸಿಕೊಂಡು ಪತ್ತೆ ಮಾಡಬಹುದು ಎಂದು ಪಿಐಬಿ ಮಾಧ್ಯಮ ಪ್ರಕಟಣೆ ತಿಳಿಸಿದೆ.

ರೈಲು ಅಪಘಾತಕ್ಕೊಳಗಾದ ಪ್ರಯಾಣಿಕರ ಕುಟುಂಬಗಳು / ಸಂಬಂಧಿಕರನ್ನು ಸಂಪರ್ಕಿಸಲು ರೈಲ್ವೆ ಸಹಾಯವಾಣಿ ಸಂಖ್ಯೆ 139 ಹಗಲಿರುಳು ಕೆಲಸ ಮಾಡುತ್ತಿದೆ. ಸಹಾಯವಾಣಿ 139 ಅನ್ನು ರೈಲ್ವೆಯ ಹಿರಿಯ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ
ಅಲ್ಲದೆ, ಬಿಎಂಸಿ ಸಹಾಯವಾಣಿ ಸಂಖ್ಯೆ 18003450061/1929 ಸಹ 24×7 ಕಾರ್ಯನಿರ್ವಹಿಸುತ್ತಿದೆ. ಮುನ್ಸಿಪಲ್ ಕಮಿಷನರ್ ಕಚೇರಿ, ಭುವನೇಶ್ವರ್, ಕಂಟ್ರೋಲ್ ರೂಂ ಅನ್ನು ಸ್ಥಾಪಿಸಿದ್ದು, ಅಲ್ಲಿಂದ ವಾಹನಗಳೊಂದಿಗೆ ಜನರನ್ನು ಆಸ್ಪತ್ರೆ ಅಥವಾ ಶವಾಗಾರಕ್ಕೆ ಕರೆದೊಯ್ದು ಶವ ಪತ್ತೆ ಮಾಡಲು ಸಹಾಯ ಮಾಡಲಾಗುವುದು

error: Content is protected !!