ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ಅಲ್ಲಿ ಭಾರತ ಒಂದು ಚಿನ್ನದ ಪದಕವನ್ನು ಗೆದ್ದಿರುವುದರ ಜೊತೆಗೆ ಈಗ ಮತ್ತೊಂದು ಚಿನ್ನವನ್ನು ಗೆದ್ದಿದೆ. ಆದ್ರೆ ಇದು ಕ್ರೀಡೆಯಲ್ಲಿ ಅಲ್ಲ. ಇದು ಒಲಿಂಪಿಕ್ಸ್ ಕ್ರೀಡಾಕೂಟದ ಸಮಯದಲ್ಲಿ ಫೇಸ್‍ಬುಕ್ ಎಂಗೇಜ್‍ಮೆಂಟ್ ನಲ್ಲಿ ವಿಶ್ವದಲ್ಲೇ ಭಾರತವು ಮೊದಲನೇ ಸ್ಥಾನವನ್ನು ಪಡೆದಿದೆ.
ಇನ್ನೂ ಫೇಸ್‍ಬುಕ್ ಜುಲೈ ೨೩ ರಿಂದ ಆಗಸ್ಟ್ ೮ ರವರೆಗೆ ಒಲಿಂಪಿಕ್ಸ್ಗೆ ಸಂಬಂಧಿಸಿದಂತೆ ಫೇಸ್‍ಬುಕ್ ಹಾಗೂ ಇನ್ಸ್ಟಾಗ್ರಾಂ ಟ್ರೆಂಡ್ಸ್ ಬಿಡುಗಡೆ ಮಾಡಿದೆ. ಅದರಲ್ಲಿ ಫೇಸ್‍ಬುಕ್ ನಲ್ಲಿ ಅತಿ ಹೆಚ್ಚು ಒಲಿಂಪಿಕ್ಸ್ ವಿಚಾರದ ಬಗ್ಗೆ ಚರ್ಚೆ ನಡೆಸಿದ ದೇಶಗಳ ಪೈಕಿ ಭಾರತವು ಮೊದಲನೇಯ ಸ್ಥಾನವನ್ನು ಪಡೆದ್ರೆ ಬಳಿಕ ಅಮೆರಿಕ, ಬ್ರೆಜಿಲ್, ಫಿಲಿಪೈನ್ಸ್ ಮತ್ತು ಮೆಕ್ಸಿಕೋ ಬೇರೆ ಬೇರೆ ಸ್ಥಾನವನ್ನು ಪಡೆದಿವೆ.
ಇನ್ನೂ ಕ್ರೀಡೆಗಳ ಪೈಕಿ ಟ್ರ್ಯಾಕ್ ಹಾಗೂ ಫೀಲ್ಡ್ ನಂತರ ಜಿಮ್ನಾಸ್ಟಿಕ್ಸ್, ರೋಯಿಂಗ್, ಬಾಕ್ಸಿಂಗ್, ಸ್ವಿಮ್ಮಿಂಗ್ ಬಗ್ಗೆ ಜಾಸ್ತಿ ಟ್ರೆಂಡ್ ಆಗಿದೆ. ಜೊತೆಗೆ ಅತಿ ಹೆಚ್ಚು ಗಮನ ಸೆಳೆದ ಕ್ರೀಡಾಪಟುಗಳ ಪೈಕಿ ಭಾರತದ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಎರಡನೇ ಸ್ಥಾನ ಪಡೆದಿದ್ದಾರೆ. ಇನ್ನೂ ಅಮೇರಿಕದ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಸಿಮೋನೆ ಬೈಲ್ಸ್ ಪ್ರಥಮ ಸ್ಥಾನ ಪಡೆದಿದ್ದಾರೆ. ಇನ್ನೂ ನೀರಜ್ ಚೋಪ್ರಾ ಅವರ ಚಿನ್ನದ ಸಾಧನೆ, ಅಮೆರಿಕ ತಂಡದ ಬಾಸ್ಕೇಟ್ ಬಾಲ್ ಗೆಲುವು ಜಾಸ್ತಿ ಚರ್ಚೆಯಾಗಿದೆ.
ಇನ್ನೂ ಇನ್‍ಸ್ಟಾಗ್ರಾಮ್ ಅಲ್ಲಿ ಭಾರತದ ಕ್ರೀಡಾಪಟುಗಳ ಪೈಕಿ ನೀರಜ್ ಚೋಪ್ರಾ ಹೊಸದಾಗಿ ೨೮ ಲಕ್ಷ, ಪಿ.ವಿ ಸಿಂಧು ೭ ಲಕ್ಷ, ಮೇರಿ ಕೋಮ್ ೨ ಲಕ್ಷ ಹೊಸ ಫಾಲೋವರ್ಗಳನ್ನು ಸಂಪಾದಿಸಿದ್ದಾರೆ.
ಜೊತೆಗೆ ಈಡಿ ವಿಶ್ವದಲ್ಲೇ ಫೇಸ್‍ಬುಕ್ ಅತಿ ಹೆಚ್ಚು ಬಳಕೆದಾರರು ಭಾರತದಲ್ಲಿದ್ದಾರೆ. ಇನ್ನೂ ಭಾರತದಲ್ಲಿ ೩೪ ಕೋಟಿ ಜನ ಫೇಸ್‍ಬುಕ್ ಬಳಕೆ ಮಾಡುತ್ತಿದ್ರೆ ಅಮೆರಿಕದಲ್ಲಿ ೨೦ ಕೋಟಿ ಜನ ಬಳಸುತ್ತಿದ್ದಾರೆ.