ಕೂಗು ನಿಮ್ಮದು ಧ್ವನಿ ನಮ್ಮದು

ಜೆಡಿಎಸ್‍ಗೆ ಬಹುಮತ; ಕಾಂಗ್ರೆಸ್-ಬಿಜೆಪಿ ಜೊತೆ ಮತ್ತೊಮ್ಮೆ ಸರ್ಕಾರ ಮಾಡಲ್ಲ- ನಿಖಿಲ್ ಕುಮಾರಸ್ವಾಮಿ

ಮಂಡ್ಯ: ಕಾಂಗ್ರೆಸ್-ಬಿಜೆಪಿ ಜೊತೆ ಜೆಡಿಎಸ್ ಮತ್ತೊಮ್ಮೆ ಸರ್ಕಾರ ಮಾಡಲ್ಲವೆಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಾತನಾಡಿರುವ ಅವರು, ‘ಈ ಬಾರಿ ಬಹುಮತದಿಂದ ಜೆಡಿಎಸ್ ಗೆದ್ದೇ ಗೆಲ್ಲುತ್ತದೆ’ ಅಂತಾ ಭರವಸೆ ವ್ಯಕ್ತಪಡಿಸಿದ್ದಾರೆ.

‘ರಾಜ್ಯಾದ್ಯಂತ ‘ಮಿಷನ್‌ 123’ ಟಾರ್ಗೆಟ್ ಇಟ್ಟುಕೊಂಡು ಹೊರಟಿದ್ದೇವೆ. ಎಲ್ಲಾ ಜಿಲ್ಲೆಯಲ್ಲಿ ಹೆಚ್ಚಿನ ಹೋರಾಟವನ್ನು ಮುಂದುವರಿಸಿದ್ದೇವೆ. ಮತ್ತೊಮ್ಮೆ ಕಾಂಗ್ರೆಸ್-ಬಿಜೆಪಿ ಜೊತೆ ಒತ್ತಡದಿಂದ ಸರ್ಕಾರ ಮಾಡುವುದಿಲ್ಲ. ಈ ಬಾರಿ ಬಹುಮತದಿಂದ ಜೆಡಿಎಸ್ ಗೆಲ್ಲುತ್ತದೆ’ ಅಂತಾ ಹೇಳಿದ್ದಾರೆ
ರಾಜ್ಯದ ಜನರು ಜನತಾದಳಕ್ಕೆ ಈ ಬಾರಿ ಆಶೀರ್ವಾದ ಮಾಡಿ ಕೈ ಹಿಡಿಯುತ್ತಾರೆ. ಎಚ್.ಡಿ.ಕುಮಾರಸ್ವಾಮಿಯವರನ್ನು ಮತ್ತೊಮ್ಮೆ ಸಿಎಂ ಮಾಡುವುದೇ ಜೆಡಿಎಸ್ ಪಕ್ಷದ ಗುರಿ ಎಂದು ಹೇಳಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಪರ್ಸನಲ್ ಡೇಟಾ ಕಲೆ ಹಾಕಿದ ಆರೋಪದ ವಿಚಾರವಾಗಿ ಮಾತನಾಡಿದ ನಿಖಿಲ್, ರಾಜ್ಯ ಸರ್ಕಾರ ಈ ಬಗ್ಗೆ ಪಾರದರ್ಶಕ, ನ್ಯಾಯಯುತವಾದ ತನಿಖೆ ಮಾಡಬೇಕು. ಖಾಸಗಿ ಸಂಸ್ಥೆ ಸರ್ಕಾರಿ ನೌಕರರ ರೀತಿ ಡಾಟಾ ಬೇಸ್ ಕಲೆಕ್ಟ್ ಮಾಡುವುದು ಸರಿಯಲ್ಲವೆಂದು ಹೇಳಿದ್ದಾರೆ. ವೋಟರ್ ಐಡಿ ಅಕ್ರಮ ವಿಚಾರವಾಗಿ ನಿಜಕ್ಕೂ ಏನು ನಡೆಯುತ್ತಿದೆ ಅನ್ನೋದರ ಬಗ್ಗೆ ರಾಜ್ಯ ಸರ್ಕಾರ ನ್ಯಾಯಯುತವಾದ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆಯಾಗಬೇಕೆಂದು ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

error: Content is protected !!