ಕೂಗು ನಿಮ್ಮದು ಧ್ವನಿ ನಮ್ಮದು

ಟೀಕೆಗಳು ಆರೋಪಗಳಿಗೆ ಮಾತ್ರವೇ ಸೀಮಿತವಾಗಿವೆ: ನರೇಂದ್ರ ಮೋದಿ

ನವದೆಹಲಿ: ಟೀಕೆಗಳಿಗೆ ನಾನು ಬಹಳ ಮಹತ್ವ ಕೊಡುತ್ತೇನೆ. ಆದ್ರೆ ಇವತ್ತು ಈಗ ಟೀಕೆಗಳನ್ನು ಕೇವಲ ಆರೋಪಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ನರೇಂದ್ರ ಮೋದಿ ಕುಟುಕಿದ್ದಾರೆ. ನಿಯತಕಾಲಿಕೆಯೊಂದಕ್ಕೆ ಸಂದರ್ಶನ ನೀಡಿರುವ ನರೇಂದ್ರ ಮೋದಿ, ಟೀಕೆಗಳಿಗೆ ನಾನು ಬಹಳ ಪ್ರಾಮುಖ್ಯತೆ ನೀಡುತ್ತೇನೆ. ಆದ್ರೆ ಇವತ್ತು ಟೀಕೆಗಳು ಆರೋಪಗಳಿಗೆ ಮಾತ್ರ ಸೀಮಿತವಾಗಿವೆ.

ಇವಾಗ ಜನ ಆರೋಪಗಳನ್ನು ಮಾತ್ರ ಮಾಡುತ್ತಾರೆ. ಆದ್ರೆ ಟೀಕೆಗೆ ಕಠಿಣ ಪರಿಶ್ರಮ, ಸಂಶೋಧನೆ ಅಗತ್ಯವಿದೆ ಎಂದು ಹೇಳುವ ಮೂಲಕ ಟೀಕೆ ಮತ್ತು ಆರೋಪಗಳ ನಡುವೆ ಮೋದಿ ಗೆರೆ ಎಳೆದ್ರು. ಬಹಳ ಜನ ಆರೋಪಗಳನ್ನು ಮಾಡುವ ಹಂತದಲ್ಲೇ ಇದ್ದಾರೆ, ಹೇಳಿಕೆ ಮಾತುಗಳನ್ನು ಕೇಳಿ ಆಟ ಆಡುವ ಜನರೇ ಹೆಚ್ಚು. ಇದಕ್ಕೆ ಕಾರಣ ಇವತ್ತಿನ ವೇಗದ ಜಗತ್ತಿನಲ್ಲಿ ಟೀಕೆ ಮಾಡಲು ಸಾಕಷ್ಟು ಕಠಿಣ ಪರಿಶ್ರಮ, ಸಂಶೋಧನೆ ನಡೆಸಲು ಬಹುಶಃ ಜನರಿಗೆ ಸಮಯವಿಲ್ಲದಿರಬಹುದು.

ಹಾಗಾಗಿ ಹಲವು ಬಾರಿ ನಾನು ಟೀಕಾಕಾರನ್ನು ಕಳೆದುಕೊಂಡಂತೆ ಭಾಸವಾಗುತ್ತದೆ ಎಂದು ಹೇಳಿದ್ದಾರೆ. ವಿರೋಧಿಗಳ ಬಗ್ಗೆ ಕೇಳಿದಾಗ, ಅವರನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಯಾರಾದ್ರು ಅವರ ಕೆಲಸವನ್ನು ಮಾತ್ರ ವಿಶ್ಲೇಷಣೆ ಮಾಡಿದ್ರೆ ಅವರ ಬಗ್ಗೆ ಗೊಂದಲ ಇರುವುದಿಲ್ಲ ಎಂದು ವಿರೋಧಿಗಳ ಬಗ್ಗೆ ನರೇಂದ್ರ ಮೋದಿ ಮಾತನಾಡಿದ್ರು. ನಾನು ಏನಾದ್ರು ಸಾಧಿಸಲು ಅಥವಾ ಏನಾದ್ರು ಆಗಲು ಬಯಸುವುದಿಲ್ಲ. ಆದ್ರೆ ಜನತೆಗಾಗಿ ಏನಾದ್ರು ಮಾಡಲು ಯಾವಾಗಲೂ ನಾನು ಬಯಸುತ್ತೇನೆ ಎಂದು ಮೋದಿ ಹೇಳಿದರು.

error: Content is protected !!