ಕೂಗು ನಿಮ್ಮದು ಧ್ವನಿ ನಮ್ಮದು

ಮಾರ್ಚ್ 12ರಂದು ರಾಜ್ಯಕ್ಕೆ ಮತ್ತೆ ಮೋದಿ: ಧಾರವಾಡ ಐಐಟಿ, ಮೈಸೂರು, ಬೆಂಗಳೂರು ಎಕ್ಸಪ್ರೆಸ್ ವೇ ಲೋಕಾರ್ಪಣೆ

ಹುಬ್ಬಳ್ಳಿ: ರಾಜ್ಯ, ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿದ್ದು, ಅಖಾಡದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯಲು ಟೊಂಕ ಕಟ್ಟಿ ನಿತ್ತಿದ್ದು, ಈ ಸಂಬಂಧ ಕೇಂದ್ರ ನಾಯಕರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಈಗ ಮತ್ತೆ ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 12 ರಂದು ಧಾರವಾಡ ಮತ್ತು ಮಂಡ್ಯ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಧಾರವಾಡದಲ್ಲಿ ಐಐಟಿ ಮತ್ತು ಮಂಡ್ಯದಲ್ಲಿ ಮೈಸೂರು-ಬೆಂಗಳೂರು ಎಕ್ಸಪ್ರೆಸ್ ವೇಯನ್ನು ಲೋಕಾರ್ಪಣೆಮಾಡಲಿದ್ದಾರೆ ಎಂದು ತಿಳಿಸಿದರು.


ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರಧಾನಿ ಮೋದಿ ಅವರು ಮಂಡ್ಯ ಕಾರ್ಯಕ್ರಮದ ಬಳಿಕ ಧಾರವಾಡಕ್ಕೆ ಬರಲಿದ್ದಾರೆ. ಧಾರವಾಡದಲ್ಲಿ ಪ್ರಧಾನಿ ಮೋದಿ IIT ಉದ್ಘಾಟನೆ ಮಾಡಲಿದ್ದಾರೆ. ಪ್ರಧಾನಿ ಮೋದಿ ಬರುವುದು ನಿನ್ನೆ ಖಚಿತವಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ಕಾರ್ಯಕ್ರಮ ಬಗ್ಗೆಯೂ ಸಭೆ ಮಾಡಿದ್ದೇನೆ. ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಭೇಟಿಯಿಂದ ‘ಕೈ’ ನಾಯಕರು ಭಯಗೊಂಡಿದ್ದಾರೆ. ಪ್ರಧಾನಿ ಮೋದಿ ಭೇಟಿಯಿಂದ ‘ಕೈ’ ನಾಯಕರು ಭಯಗೊಂಡಿದ್ದಾರೆ. 2018 ರಲ್ಲಿ ಅವರ ಪಾರ್ಟಿ ಸೋತಿತ್ತು. ನರೇಂದ್ರ ಮೋದಿ ಪ್ರಧಾನಿಯಾಗುವ ಮುಂಚೆ, ಸಿದ್ದರಾಮಯ್ಯ 2013ರ ಚುನಾವಣೆಯಲ್ಲಿ ಗೆದ್ದರು. ಮೋದಿ ಪ್ರಧಾನಿಯಾದ ಬಳಿಕ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಚುನಾವಣೆಯಲ್ಲಿ ಸೋತರು. ಪ್ರಧಾನಿ ಮೋದಿ ಅವರ ವಿರುದ್ಧ ಅಭದ್ರವಾದ ಭಾಷೆ ಬಳಸಿ 2019 ರಲ್ಲಿ ಸೋತರು ಎಂದು ವಾಗ್ದಾಳಿ ಮಾಡಿದರು.

ಶಾಸಕ‌ ಮಾಡಾಳ ವಿರುಪಾಕ್ಷಪ್ಪ ಪುತ್ರನ ಮೇಲೆ ಲೋಕಾಯುಕ್ತ ದಾಳಿ ವಿಚಾರವಾಗಿ ಮಾತನಾಡಿದ ಅವರು ಇದರ ಅರ್ಥ ಬಿಜೆಪಿ‌ ಪಾರದರ್ಶಕತೆ ಇದೆ ಅನ್ನೋದು. ಲೋಕಾಯುಕ್ತವನ್ನು ನಾವು ಬಲಗೊಳಿಸಿದ್ದೇವೆ. ಇದರಲ್ಲಿ ಯಾವ ಹಸ್ತಕ್ಷೇಪ ಇಲ್ಲ. ಕಾಂಗ್ರೆಸ್ ಕಾಲದಲ್ಲಿ ಲೋಕಾಯುಕ್ತ, ACB ಎರಡನ್ನು ಹಲ್ಲಿಲ್ಲದ ಹುಲಿಯಾಗಿ‌ದ್ದವು. ನಾವು ಲೋಕಾಯುಕ್ತನ್ನು ಬಲಗೊಳಿಸಿದ್ದೇವೆ. ಯಾರು ತಪ್ಪು ಮಾಡಿದರು ಹಿಡಿಯಬೇಕು. ಇವತ್ತು ಶಾಸಕರ ಮಗ ಸಿಕ್ಕಿದ್ದಾರೆ. ಕಾನೂನು ಪ್ರಕಾರ ಕ್ರಮ ಆಗತ್ತೆ. ಯಾರು ತಪ್ಪು ಮಾಡಿದರು ತಪ್ಪೆ. ಬಿಜೆಪಿಗೆ ಇದರಿಂದ ಯಾವುದೆ ತೊಂದರೆ ಇಲ್ಲ. ಕಾಂಗ್ರೆಸ್ನವರು ಹೇಳುವ ಪ್ರಕಾರ ಬೇರೆಯವರು ಮಾಡಿದರೆ, ತಪ್ಪು ಅನ್ನುವ ತರಹ ನಾವಿಲ್ಲ. ಮುಂದೆನೂ‌‌ ಲೋಕಾಯುಕ್ತಕ್ಕೂ ಬಲ‌ ಇರತ್ತೆ ಎಂದು ಹೇಳಿದರು.

ಸಚಿವ ವಿ ಸೋಮಣ್ಣ ಜೊತೆ ನಾನು‌ ಸಂಪರ್ಕದಲ್ಲಿದ್ದೇನೆ. ಅವರು ಕಾಂಗ್ರೆಸ್​​ಗೆ ಹೋಗಲ್ಲ. ನಾನು ಸೋಮಣ್ಣ ಅವರೊಂದಿಗೆ ಮಾತಾಡಿದ್ದೇನೆ. ಕಾಂಗ್ರೆಸ್ ಹೊಗುವ ಪ್ರಶ್ನೆ ಇಲ್ಲ. ಸುಮಲತಾ ಮೊದಲಿಂದಲೂ‌ ನಮಗೆ ಸಪೋರ್ಟ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

error: Content is protected !!