ಕೂಗು ನಿಮ್ಮದು ಧ್ವನಿ ನಮ್ಮದು

ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ದೆಹಲಿ: ದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದೆಹಲಿ ಕರ್ನಾಟಕ ಸಂಘ ಆಯೋಜಿಸಿರುವ ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ “ಬಾರಿಸು ಕನ್ನಡ ಡಿಂಡಿಮವ” ಸಮಾರಂಭವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಬಳಿಕ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದು ಕನ್ನಡದಲ್ಲೇ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭಿಸಿದರು. ರಾಷ್ಟ್ರ ನಿರ್ಮಾಣದಲ್ಲಿ ಕರ್ನಾಟಕ ಜನರ ಕೊಡುಗೆ ಸಾಕಷ್ಟಿದೆ. ಹನುಮಂತ ಇಲ್ಲದೇ ರಾಮ ಇಲ್ಲ ರಾಮಾಯಣವೂ ಇಲ್ಲ.

ಮಧ್ಯ ಕಾಲದಲ್ಲಿ ವಿದೇಶಿಗರು ಸೋಮನಾಥ ದೇವಸ್ಥಾನ ಮೇಲೆ ದಾಳಿ ಮಾಡಿದರು. ಸ್ವಾತಂತ್ರ್ಯ ಸಿಕ್ಕ ಬಳಿಕವೂ ಕಾಶಿ ವಿವಿಯ ಮೊದಲ ಕನ್ನಡಿಗರು ಏಕ್ ಭಾರತ್ ಶ್ರೇಷ್ಠ ಭಾರತದ ಮಂತ್ರವನ್ನು ಗೆದ್ದಿದ್ದಾರೆ. ರಾಷ್ಟ್ರಕವಿ ಕುವೆಂಪು ರಚಿಸಿದ ನಾಡಗೀತೆಯನ್ನು ನಾವು ಕೇಳಿದೆವು. ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೇ ಇಡೀ ಭಾರತ ಹಾಗೂ ಕರ್ನಾಟಕದ ವಿವರಣೆಯನ್ನು ಒಳಗೊಂಡಿದೆ. ಭಾರತ ಇಂದು ಜಿ-20 ಅಧ್ಯಕ್ಷತೆಯನ್ನು ವಹಿಸುತ್ತಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.

ಕರ್ನಾಟಕದ ಅಭಿವೃದ್ಧಿಗೆ ಮೊದಲ ಆದ್ಯತೆ
ಕರ್ನಾಟಕದ ಅಭಿವೃದ್ಧಿ ಆದ್ಯತೆಯಾಗಿದೆ. ಮೊದಲು ಕರ್ನಾಟಕದಲ್ಲಿ ಸರ್ಕಾರ ಮಾಡಿ ಅಲ್ಲಿಂದ ಹಣ ಹೊರಗೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಈಗ ಇಲ್ಲಿಯ ಜನರ ಅಭಿವೃದ್ಧಿಗೆ ಬಳಕೆಯಾಗುತ್ತಿದೆ. ರಾಜ್ಯದ ಅಭಿವೃದ್ಧಿಗೆ ಮೂರು ವರ್ಷದ ಅಭಿವೃದ್ಧಿಯಲ್ಲಿ 30 ಸಾವಿರ ಕೋಟಿ ಸರಕಾರ ನೀಡಿದೆ. ಕಾಂಗ್ರೆಸ್ ಹತ್ತು ವರ್ಷದ ಅವಧಿಯಲ್ಲಿ ಹನ್ನೊಂದು ಸಾವಿರ ಕೋಟಿ ನೀಡಿತ್ತು. ಪ್ರತಿ ವರ್ಷ ನಮ್ಮ ಸರ್ಕಾರ ರಸ್ತೆಗೆ ಐದು ಸಾವಿರ ಕೋಟಿ ನೀಡುತ್ತಿದೆ. ಕಾಂಗ್ರೆಸ್ ಐದು ವರ್ಷಕ್ಕೆ ಆರು ಸಾವಿರ ಕೋಟಿ ನೀಡುತ್ತಿತ್ತು ಎಂದರು.

ಭದ್ರಾ ಮೇಲ್ದಂಡೆ ಮೂಲಕ ಮಧ್ಯ ಕರ್ನಾಟಕದ ಅಭಿವೃದ್ಧಿ ಮಾಡುತ್ತಿದೆ. ಇದರಿಂದ ಕರ್ನಾಟಕದ ವಿಕಾಸ ಬದಲಾಗಲಿದೆ. ಮುಂದಿನ 25 ವರ್ಷ ಮಹತ್ವದಾಗಿದೆ. ಮತ್ತಷ್ಟು ಮಹತ್ವದ ಕೆಲಸಗಳನ್ನು ಮಾಡಬಹುದು. ಕಲಿಕೆ ಮತ್ತು ಕಲೆ ಎರಡನ್ನು ಅಭಿವೃದ್ಧಿ ಮಾಡಬೇಕು. ಕನ್ನಡ ಭಾಷೆ ಓದುವವರಿಂದ ರಿಡೀಂಗ್ ಹ್ಯಾಬಿಟ್ ಚೆನ್ನಾಗಿರುತ್ತದೆ. ಈ ಕೌಶಲ್ಯ ಬೇರೆ ಭಾಷೆಗಳಲ್ಲಿ ಇಲ್ಲ ಎಂದು ಪ್ರಧಾನಿ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕೆಲವರು ದೇಶ ಒಡೆಯುವ ಕೆಲಸ ಮಾಡುತ್ತಾರೆ
ಕೆಲವರು ದೇಶವನ್ನು ಒಡೆಯುವ ಕೆಲಸ ಮಾಡುತ್ತಾರೆ. ದೇವರ ದಾಸಿಮಯ್ಯ ಸಂತರು ಇಷ್ಟ ಲಿಂಗದ ಮೂಲಕ ದೇಶವನ್ನು ಜೋಡಿಸುತ್ತಾರೆ. ರಾಣಿ ಅಬ್ಬಕ್ಕ, ಓಬವ್ವ, ಸಂಗೊಳ್ಳಿ ರಾಯಣ್ಣನಂತಹ ವೀರ ವಿರೋಧಿಗಳ ಮುಂದೆ ಗೋಡೆಯಂತೆ‌ ನಿಲ್ಲುತ್ತಾರೆ. ಕರ್ನಾಟಕ ಭಾರತವನ್ನು ಪ್ರೇರಿತಗೊಳಿಸಿದೆ. ನ್ಯಾಷನಲ್ ವಾರ್ ಮೆಮೊರಿಯಲ್, ಕರ್ತವ್ಯ ಪಥ್, ಪ್ರಧಾನಮಂತ್ರಿ ಮ್ಯೂಸಿಯಂ ಎಲ್ಲವೂ ನೋಡಿಕೊಂಡು ಹೋಗಬೇಕು. ನೋಡಿದ ಮೇಲೆ ನೀವೂ ಗರ್ವ ಪಡಲಿದ್ದಿರಿ. ಈ ಕೆಲಸ ಮೊದಲೇ ಆಗಬೇಕಿತ್ತು ಎನ್ನಲಿದ್ದೀರಿ.

ಇನ್ನು ಸಿರಿಧಾನ್ಯದ ಪ್ರಮುಖ ಕೇಂದ್ರ ಕರ್ನಾಟಕ. ರಾಗಿ ಕರ್ನಾಟಕ ಸಂಸ್ಕೃತಿಯ ಭಾಗ. ಬಿಎಸ್‌ವೈ ಕಾಲದಿಂದಲೂ ಸಿರಿಧಾನ್ಯ ಪ್ರಚಾರ ಮಾಡಲು ಆರಂಭಿಸಿತ್ತು. ಈಗ ಇಡಿ ವಿಶ್ವದಲ್ಲಿ ಇದರ ಬೇಡಿಕೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಸಣ್ಣ ಸಣ್ಣ ರೈತರಿಗೆ ಲಾಭ ಸಿಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

error: Content is protected !!