ಹುಬ್ಬಳ್ಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹುಬ್ಬಳ್ಳಿಯಲ್ಲಿ ಆಗಮಿಸುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರಧಾನಿಗಳನ್ನು ಉತ್ತರ ಕರ್ನಾಟಕ ಅದರಲ್ಲೂ ವಿಶೇಷವಾಗಿ ಹುಬ್ಬಳ್ಳಿ-ಧಾರವಾಡದ ಜನತೆ ತುದಿಗಾಲಲ್ಲಿ ನಿಂತಿದೆ. ಪ್ರಧಾನಿಗಳಿಗೆ ನಡೆಯುವ ಸನ್ಮಾನ ಪ್ರಾದೇಶಿಕತೆಯನ್ನು ಬಿಂಬಿಸಲಿದೆ. ಹಾವೇರಿಯ ವಿಶೇಷ ಏಲಕ್ಕಿ ಹಾರ ತಯಾರಿಸಲಾಗಿದ್ದು ಅದರಿಂದ ಅವರನ್ನು ಸನ್ಮಾನಿಸಲಾಗುವುದು.
ಗದಗ ಮತ್ತು ಬೆಂಗೇರಿಯಲ್ಲಿ ತಯಾರಾಗುವ ತ್ರಿವರ್ಣಕ್ಕೆ ತೇಗಿನಮರದ ಕಟ್ಟಿಗೆಯ ಫ್ರೇಮ್ ಹಾಕಿ ಅದನ್ನು ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡಲಾಗುವುದು. ಹುಬ್ಬಳ್ಳಿಯ ರೇಲ್ವೇ ಮೈದಾನದಲ್ಲಿ ಪ್ರಧಾನಿಗಳು 26ನೇ ಯುವಜನೋತ್ಸವವನ್ನು ಉದ್ಘಾಟಿಸಿ ಮಾತಾಡಲಿದ್ದಾರೆ. ದೇಶದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸಾವಿರಾರು ಯುವ ಪ್ರತಿನಿಧಿಗಳು ಹುಬ್ಬಳ್ಳಿಗೆ ಆಗಮಿಸಿದ್ದಾರೆ.