ನವದೆಹಲಿ: ಡಿಜಿಟಲ್ ವಿಶ್ವವಿದ್ಯಾನಿಲಯವು ಭಾರತದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಭೂತಪೂರ್ವ ಹೆಜ್ಜೆಯಾಗಿದ್ದು, ದೇಶದಲ್ಲಿ ಸೀಟುಗಳ ಕೊರತೆಯ ಸಮಸ್ಯೆಯನ್ನು ಕೊನೆಗೊಳಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. 2022ರ ಕೇಂದ್ರ ಬಜೆಟ್‍ನಲ್ಲಿ ಮಾಡಲಾದ ಘೋಷಣೆಗಳ ಅನುಷ್ಠಾನದ ಕುರಿತು ಶಿಕ್ಷಣ ಸಚಿವಾಲಯದ ವೆಬಿನಾರ್‍ನ ಸಮಗ್ರ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು, 2022-23ರ ಕೇಂದ್ರ ಬಜೆಟ್ ಅನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದೋಂದು ಆಳವಾದ ಶಿಕ್ಷಣ ನೀತಿಯಾಗಿದೆ ಎಂದ್ರು.
ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಡಿಜಿಟಲ್ ಸಂಪರ್ಕವು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಹೇಗೆ ಚಾಲನೆಯಲ್ಲಿಟ್ಟಿತು ಎಂಬುದನ್ನು ಸಹ ಪ್ರಧಾನಿ ಮೋದಿ ಅವರು ವೆಬಿನಾರ್‍ನಲ್ಲಿ ಭಾಗವಹಿಸಿದ ಸಭಿಕರಿಗೆ ತಿಳಿಸಿದ್ರು.
ಯುವ ಪೀಳಿಗೆಯನ್ನು ಭಾರತದ ಭವಿಷ್ಯ ಅಂತ ವಿವರಿಸಿದ ಮೋದಿ ಅವರು ಸೋಮವಾರ ಭಾರತದ ಭವಿಷ್ಯದ ನಾಯಕರನ್ನು ಸಬಲೀಕರಣಗೊಳಿಸಲು ಕರೆ ನೀಡಿದ್ರು. ನಮ್ಮ ಯುವ ಪೀಳಿಗೆ ದೇಶದ ಭವಿಷ್ಯದ ನಾಯಕರೆ ಆದ್ದರಿಂದ ಇವತ್ತಿನ ಯುವ ಪೀಳಿಗೆಯನ್ನು ಸಶಕ್ತಗೊಳಿಸುವುದು ಎಂದರೆ ಭಾರತದ ಭವಿಷ್ಯವನ್ನು ಸಶಕ್ತಗೊಳಿಸುವುದಾಗಿದೆ ಎಂದರು.
2022ರ ಕೇಂದ್ರ ಬಜೆಟ್‍ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಐದು ವಿಷಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮೊದಲನೆಯದು ಗುಣಮಟ್ಟದ ಶಿಕ್ಷಣದ ಸಾರ್ವತ್ರೀಕರಣ, ೨ನೆಯದ್ದು ಕೌಶಲ್ಯ ಅಭಿವೃದ್ಧಿ, ಮೂರನೆಯದು ನಗರ ಯೋಜನೆ ಹಾಗೂ ವಿನ್ಯಾಸ. ನಾಲ್ಕನೆಯದು ಅಂತರಾಷ್ಟ್ರೀಕರಣ ಭಾರತದಲ್ಲಿ ವಿಶ್ವ ದರ್ಜೆಯ ವಿದೇಶಿ ವಿಶ್ವವಿದ್ಯಾಲಯಗಳು ಹಾಗೂ ಐದನೆಯದು ಎವಿಜಿಸಿ ಆನಿಮೇಷನ್ ವಿಷುಯಲ್ ಎಫೆಕ್ಟ್ಸ್ ಗೇಮಿಂಗ್ ಕಾಮಿಕ್ ಆಗಿದೆ ಎಂದ್ರು.
ರಾಷ್ಟ್ರೀಯ ಡಿಜಿಟಲ್ ವಿಶ್ವವಿದ್ಯಾಲಯವು ಭಾರತದಲ್ಲಿ ಸೀಟುಗಳ ಕೊರತೆಯ ಸಮಸ್ಯೆಯನ್ನು ಪರಿಹರಿಸುತ್ತದೆ. ಈ ನೀತಿಯಲ್ಲಿ ಅನಿಯಮಿತ ಸೀಟುಗಳಿರುತ್ತವೆ. ಡಿಜಿಟಲ್ ವಿಶ್ವವಿದ್ಯಾನಿಲಯವು ಸಾಧ್ಯವಾದಷ್ಟು ಬೇಗ ಪ್ರಾರಂಭಿಸಲು ನಾನು ಎಲ್ಲಾ ಮಧ್ಯಸ್ಥಗಾರರನ್ನು ಕೋರುತ್ತೇನೆ ಎಂದು ಮೋದಿ ಅವರು ಆಗ್ರಹಿಸಿದರು.
ಮಾತೃಭಾಷೆಯಲ್ಲಿ ಶಿಕ್ಷಣವು ಮಕ್ಕಳ ಮಾನಸಿಕ ಬೆಳವಣಿಗೆಗೆ ಸಂಬಂಧಿಸಿದೆ.
ಹಲವಾರು ವೈದ್ಯಕೀಯ, ಟೆಕ್-ಎಡ್ಯೂ ಸ್ಟಾರ್ಟ್‍ಅಪ್‍ಗಳು ಅನೇಕ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ಪ್ರಾರಂಭವಾಗಿವೆ. ಇ-ವಿದ್ಯಾ, ಒನ್ ಕ್ಲಾಸ್ ಒನ್ ಚಾನೆಲ್, ಡಿಜಿಟಲ್ ಲ್ಯಾಬ್‍ಗಳು, ಡಿಜಿಟಲ್ ಯೂನಿವರ್ಸಿಟಿಯಂತಹ ಶೈಕ್ಷಣಿಕ ಮೂಲಸೌಕರ್ಯಗಳು ಯುವಕರಿಗೆ ಬಹಳಷ್ಟು ಸಹಾಯ ಮಾಡಲಿವೆ ಎಂದರು. ಶಿಕ್ಷಣ ಹಾಗೂ ಕೌಶಲ್ಯ ವಲಯದ ಕುರಿತು ವೆಬಿನಾರ್ ಅನ್ನು ಆಯೋಜಿಸುತ್ತಿರುವ ಶಿಕ್ಷಣ ಸಚಿವಾಲಯವು ಪ್ರಸ್ತುತತೆಯ ವಿವಿಧ ವಿಷಯಗಳ ಕುರಿತು ಅಧಿವೇಶನಗಳನ್ನು ನಡೆಸುತ್ತದೆ.
ವಿವಿಧ ಸಚಿವಾಲಯಗಳು ಹಾಗೂ ರಾಜ್ಯ ಸರ್ಕಾರಗಳ ಸರ್ಕಾರಿ ಅಧಿಕಾರಿಗಳು, ಉದ್ಯಮ ಪ್ರತಿನಿಧಿಗಳು, ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಮತ್ತು ಇತರ ತಜ್ಞರು ಈ ವೆಬಿನಾರ್‍ನಲ್ಲಿ ಭಾಗವಹಿಸುತ್ತಾರೆ.
ಹಲವಾರು ವಿಷಯಗಳ ಅಡಿಯಲ್ಲಿ 7 ಸಮಾನಾಂತರ ವಿರಾಮವಿಲ್ಲದ ಸೆಷನ್‍ಗಳನ್ನು ನಡೆಸಲಾಗುತ್ತದೆ. ಶಿಕ್ಷಣದ ಸುಲಭತೆ ಹಾಗೂ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳುವುದರ ಮೇಲೆ ಗಮನಹರಿಸುವ ತತ್ವಗಳಿಗೆ ಅನುಗುಣವಾಗಿ ಕಾರ್ಯಗತಗೊಳಿಸಲು ಕ್ರಮದ ಅಂಶಗಳು, ವಿಶಾಲವಾದ ಕಾರ್ಯತಂತ್ರಗಳು ಹಾಗೂ ಟೈಮ್‍ಲೈನ್‍ಗಳಂತಹ ವಿಷಯಗಳ ಕುರಿತು ಈ ವೆಬಿನಾರ್‍ನಲ್ಲಿ ಚರ್ಚಿಸಲಾಗುತ್ತದೆ.
ಡಿಜಿಟಲ್ ಯೂನಿವರ್ಸಿಟಿ, ದಿ ಡಿಜಿಟಲ್ ಟೀಚರ್, ಒನ್ ಕ್ಲಾಸ್ ಒನ್ ಚಾನೆಲ್‍ನ ವಿಸ್ತರಣೆ, ನಗರ ಯೋಜನೆ ಹಾಗೂ ವಿನ್ಯಾಸದಲ್ಲಿ ಭಾರತದ ನಿರ್ದಿಷ್ಟ ಜ್ಞಾನ, ಬಲವಾದ ಉದ್ಯಮ-ಕೌಶಲ್ಯ ಸಂಪರ್ಕವನ್ನು ಬೆಳೆಸುವ ಕಡೆಗೆ ಅಭಿವೃದ್ಧಿಪಡಿಸುವುದು. ಸಿಟಿಯಲ್ಲಿನ ಶಿಕ್ಷಣ ಸಂಸ್ಥೆಗಳು ಹಾಗೂ ಎವಿಜಿಸಿಯಲ್ಲಿ ಉದ್ಯಮ-ಕೌಶಲ್ಯ ಸಂಪರ್ಕವನ್ನು ಬಲಪಡಿಸುವುದು ವೆಬ್‍ನಾರ್‍ನ ವಿಷಯಗಳಾಗಿವೆ. ಬಜೆಟ್ ಘೋಷಣೆಗಳ ಸಮರ್ಥ ಮತ್ತು ತ್ವರಿತ ಅನುಷ್ಠಾನಕ್ಕೆ ಅನುಕೂಲವಾಗುವಂತೆ, ಭಾರತ ಸರ್ಕಾರವು ವಿವಿಧ ಪ್ರಮುಖ ವಲಯಗಳಲ್ಲಿ ವೆಬಿನಾರ್‍ಗಳ ಸರಣಿಯನ್ನು ನಡೆಸುತ್ತದೆ.
ಸಾರ್ವಜನಿಕ ಹಾಗೂ ಖಾಸಗಿ ವಲಯಗಳು, ಶೈಕ್ಷಣಿಕ ಮತ್ತು ಉದ್ಯಮದ ತಜ್ಞರೊಂದಿಗೆ ಚರ್ಚೆ ಮಾಡುವುದು. ವಿವಿಧ ಕ್ಷೇತ್ರಗಳ ಅಡಿಯಲ್ಲಿ ವಿವಿಧ ಸಮಸ್ಯೆಗಳ ಅನುಷ್ಠಾನಕ್ಕೆ ಹೇಗೆ ಉತ್ತಮವಾಗಿ ಮುಂದುವರಿಯುವುದು ಎಂಬುದರ ಕುರಿತು ಕಾರ್ಯತಂತ್ರಗಳನ್ನು ಗುರುತಿಸುವುದು ಇದರ ಉದ್ದೇಶವಾಗಿದೆ ಎಂದು ಶಿಕ್ಷಣ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.