ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಬೆಟ್ಟದಲ್ಲಿ ಮುಂಜಾನೆ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸಿದ್ದಾರೆ. ಜೊತೆಗೆ ಕೋವಿಡ್ ನಿಯಮಗಳನ್ನ ಗಾಳಿಗೆ ತೂರಿದ್ದು, ಮಾತ್ರವಲ್ಲದೆ, ಕೆಲ ಯುವಕರು ಹಾಡಹಗಲೇ ಯಾರ ಭಯವು ಇಲ್ಲದೆ ರಾಜಾರೋಷವಾಗಿ ಸಾರ್ವಜನಿಕ ಸ್ಥಳದಲ್ಲೇ ಹುಕ್ಕಾ ಸೇವನೆ ಮಾಡಿದ್ದಾರೆ. ಜೊತೆಗೆ ನೂರಾರು ಮಂದಿ ಸಾರ್ವಜನಿಕರ ಸಮ್ಮುಖದಲ್ಲೇ ಚಾಪಿ ಹಾಸಿ ಮ್ಯೂಸಿಕ್ ಹಾಕಿಕೊಂಡು ಹುಕ್ಕಾ ಸೇವನೆ ಮಾಡುತ್ತಾ ಮೋಜು ಮಸ್ತಿ ಮಾಡುತ್ತಿದ್ದಾರೆ.
ಇನ್ನೂ ಕೋವಿಡ್ ನಿಯಮಗಳನ್ನ ಬ್ರೇಕ್ ಮಾಡೋದು ಒಂದು ಕಡೆಯಾದ್ರೆ ಮತ್ತೊಂದು ಕಡೆ ಈ ರೀತಿ ಹುಕ್ಕಾ ಸೇವನೆ, ಮದ್ಯಪಾನ ಮಾಡುವಂತಹ ಪ್ರಕರಣಗಳು ಪದೇ ಪದೇ ನಡೆಯುತ್ತಿವೆ. ಇನ್ನೂ ನಂದಿಬೆಟ್ಟವನ್ನು ಬಂದ್ ಮಾಡಿರುವ ಪರಿಣಾಮ ನಂದಿಗಿರಿಧಾಮ ದತ್ತ ಬರುವ ಪ್ರವಾಸಿಗರಿಗೆ ಚೆಕ್ ಪೋಸ್ಟ್ ಬಳಿ ತಡೆ ಹಿಡಿಯಲಾಗುತ್ತದೆ. ಜೊತೆಗೆ ಈ ವೇಳೆಯಲ್ಲಿ ತಪ್ಪಲಲ್ಲೇ ಕಾರು ಮತ್ತು ಬೈಕ್ ಅನ್ನು ಒಂದು ಕಡೆ ಪಾರ್ಕ್ ಮಾಡಿ ಅಕ್ಕಪಕ್ಕದ ಬೆಟ್ಟಗಳತ್ತ ಬರುವ ಪ್ರವಾಸಿಗರು ಈ ರೀತಿ ಮೋಜು ಮಾಡುತ್ತಿದ್ದಾರೆ.
ಇನ್ನೂ ನಂದಿಬೆಟ್ಟದ ತಪ್ಪಲಿನ ಚೆಕ್ ಪೋಸ್ಟ್ ಚಿಕ್ಕಬಳ್ಳಾಪುರದ ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ್ರೆ ತಪ್ಪಲಿಂದ ಬೆಟ್ಟದ ಕೆಳಭಾಗದ ಕಡೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದೆ. ಜೊತೆಗೆ ನಂದಿಗಿರಿಧಾಮ ಪೊಲೀಸರು ಚೆಕ್ ಪೋಸ್ಟ್ ಸೇರಿ ಮೇಲ್ಬಾಗದಲ್ಲಿ ಬಂದು ಬಸ್ತ ಮಾಡಿದ್ದಾರೆ.
ಇನ್ನೂ ತಪ್ಪಲಿನ ಕೆಳ ಭಾಗದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸೂಕ್ತ ಬಂದು ಬಸ್ತ್ ಪೊಲೀಸರ ಯೋಜನೆಯನ್ನು ಮಾಡುತ್ತಿಲ್ಲ. ಹಾಗಾಗಿ ಇತರ ಪ್ರಕರಣಗಳು ಇಲ್ಲಿ ಆಗುತ್ತಿವೆ ಅಂತಿದ್ದಾರೆ ಚಿಕ್ಕಬಳ್ಳಾಪುರ ಪೊಲೀಸರು. ಇನ್ನೂ ಪ್ರವಾಸಿಗರ ಇಂತಹ ಹುಚ್ಚಾಟಗಳಿಗೆ ಪೊಲೀಸರು ಕಡಿವಾಣ ಹಾಕಬೇಕು ಎಂದು ಪ್ರಜ್ಞಾವಂತ ನಾಗರೀಕರು ಒತ್ತಾಯಿಸಿದ್ರು.