ಬೆಂಗಳೂರು:“ನಾನು ರಾಜ್ಯದ ಸಿಎಂ ಆಗಲು ರೆಡಿ” ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಎಲ್ಲೇಡೆ ಸಿಎಂ ಬದಲಾವಣೆ ಕುರಿತು ಭಾರಿ ಚರ್ಚೆ ಶುರವಾಗಿತ್ತು. ಆ ಎಲ್ಲಾ ಚರ್ಚೆಗೆ ಇಂದು ಸಂಜೆ 5ಗಂಟೆಗೆ ಬಿಜೆಪಿ ಹೈಕಮಾಂಡ್ ಯಿಂದ ಸ್ಪಷ್ಟಿಕರಣ ಸಿಗಲಿದೆ ಎಂದು ಕಾದು ಕುಳಿತಿದ್ದಾರೆ.
ಇನ್ನು ಹೈಕಮಾಂಡ್ ನಿಂದ ಯಾವುದೇ ಸಂದೇಶ ಸಿಕ್ಕಿಲ್ಲ ಅದಕ್ಕು ಮುನ್ನವೆ ಮುರುಗೇಶ್ ನಿರಾಣಿ ನಾನು ಸಿಎಂ ಆಗಲು ಸಿದ್ದ, ಸಿಎಂ ಮಾಡಿದ್ರೆ ಕೆಲಸ ಮಾಡಲು ರೆಡಿ ಇದ್ದೇನೆ, ಯಾರನ್ನು ಸಿಎಂ ಮಾಡ್ಬೇಕು ಅನ್ನೋದು ಹೈಕಮಾಂಡ್ಗೆ ಗೊತ್ತಿದೆ, ಹೈಕಮಾಂಡ್ ಜವಾಬ್ದಾರಿ ಕೊಟ್ರೆ ನಾನು ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ. ಸಿಎಂ ಯಡಿಯೂರಪ್ಪನವರರಿಗೆ ಸಂದೇಶ ಕಳುಹಿಸೋ ಮುನ್ನವೇ ವರಿಷ್ಠರು ಮುರುಗೇಶ್ ನಿರಾಣಿಯವರಿಗೆ ದೆಹಲಿಯಿಂದ ಕರೆ ಬಂದಿದ್ದು, ದಿಢೀರಾಗಿ ಹೈಕಮಾಂಡ್ನಿಂದ ಕರೆ ಬಂದಿರುವುದು ಕುತೂಹಲಕ್ಕೆ ಗ್ರಾಸವಾಗಿದೆ. ಏನೆಲ್ಲಾ ಬೆಳವಣಿಗೆಗಳು ನಡೆಯುತ್ತವೆ ಎಂಬುದನ್ನು ಕಾದು ನೋಡಬೇಕಿದೆ.