ಕೂಗು ನಿಮ್ಮದು ಧ್ವನಿ ನಮ್ಮದು

ವಲಸೆ ಹಕ್ಕಿ ಹೆಚ್ ವಿಶ್ವನಾಥ್ ವಿರುದ್ಧ ಶಾಸಕ ಎಂ ಪಿ ರೇಣುಕಾಚಾರ್ಯ ತೀವ್ರ ವಾಗ್ದಾಳಿ

ಬೆಂಗಳೂರು: ವಲಸೆ ಹಕ್ಕಿ ಹೆಚ್ ವಿಶ್ವನಾಥ್ ವಿರುದ್ಧ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಮತ್ತು ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನೀವು ಮೂಲ ಬಿಜೆಪಿಗರು ಅಲ್ಲ. ನೀವೂ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರೂ ನಿಮ್ಮನ್ನು ನಮ್ಮ ನಾಯಕ ಯಡಿಯೂರಪ್ಪನವರು ಎಂಎಲ್ಸಿ ಯನ್ನಾಗಿ ಮಾಡಿದರು. ನಿಮ್ಮನ್ನು ಮಂತ್ರಿಯನ್ನಾಗಿ ಮಾಡಬೇಕು ಅಂತಿದ್ದರು. ಆದ್ರೆ ಕೋರ್ಟ್ ತಡೆ ಬಂದಿದೆ. ಸಚಿವ ಸ್ಥಾನ ಸಿಕ್ಕಿಲ್ಲವೆಂದು ವಿಶ್ವನಾಥ್ ಹೀಗೆಲ್ಲ ಮಾತನಾಡಬೇಡಿ ಎಂದು ಯಡಿಯೂರಪ್ಪ ಪರ ರೇಣುಕಾಚಾರ್ಯ ಬೆಂಗಳೂರಿನಲ್ಲಿ ಫುಲ್ ಬ್ಯಾಟಿಂಗ್ ಮಾಡಿದ್ದಾರೆ. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದು ದೂರಿದ್ದೀರಿ. ಎಂಎಲ್‌ಸಿ ವಿಶ್ವನಾಥ್‌ರವರೇ ಅವರೇ ನಿಮ್ಮ ವಯಸ್ಸೆಷ್ಟು? ಹತಾಶೆಯಿಂದ ಹೀಗೆಲ್ಲಾ ಮಾತನಾಡಬೇಡಿ ಎಂದು ಹೆಚ್ ವಿಶ್ವನಾಥ್ ವಿರುದ್ಧ ರೇಣುಕಾಚಾರ್ಯ ಗುಡುಗಿದರು. ಕೊರೊನಾ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಇಡೀ ರಾಜ್ಯದುದ್ದಕ್ಕೂ ಓಡಾಡಿಕೊಂಡು ಬಂದಿದ್ದಾರೆ. BSY ವಯಸ್ಸಾಗಿದ್ದರೂ ಯುವಕರಂತೆ ಕೆಲಸ ಮಾಡ್ತಿದ್ದಾರೆ. ಅದು ನಿಮ್ಮ ಮಬ್ಬುಗಣ್ಣಿಗೆ ಕಾಣುತ್ತಿಲ್ಲವಾ? ಎಂದು ರೇಣುಕಾಚಾರ್ಯ ಝಾಡಿಸಿದರು. ನೀವು ಒರಿಜಿನಲ್ ಆಗಿ ಬಿಜೆಪಿಯವರಾ? ಈಗ ಹತಾಶರಾಗಿ ಮಾತನಾಡುತ್ತಿದ್ದೀರಿ. ಬಿಎಸ್ವೈ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ? ಸಿಎಂ ಆಯ್ಕೆ ಮಾಡುವ ಹಕ್ಕು ಇರುವುದು ಶಾಸಕರಿಗೆ. ಸಚಿವ ಸ್ಥಾನ ಸಿಕ್ಕಿಲ್ಲವೆಂದು ವಿಶ್ವನಾಥ್ ಹೀಗೆ ಹೇಳ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಶಾಸಕ ರೇಣುಕಾಚಾರ್ಯ ಮಾಧ್ಯಮ ಪ್ರತಿನಿಧಿಗಳ ಎದುರು ಹೇಳಿದರು. ಇನ್ನೂ H.ವಿಶ್ವನಾಥ್ ಅವರೇ ಸಿಎಂ ಬಗ್ಗೆ ಮಾತನಾಡಲು ನೀವ್ಯಾರು? ನೀವು ಯಾವ ಪಕ್ಷದಲ್ಲಿರುತ್ತೀರೋ ಅಲ್ಲೇ ಟೀಕೆ ಮಾಡ್ತೀರಿ. ಈ ಹಿಂದೆ ಎಸ್.ಎಂ.ಕೃಷ್ಣ ವಿರುದ್ಧ ಟೀಕೆ ಮಾಡುತ್ತಿದ್ರಿ. ಯತ್ನಾಳ್ ಮನೋಭಾವವೇ ಹೆಚ್.ವಿಶ್ವನಾಥ್ಗೂ ಇದೆ. ಯತ್ನಾಳ್, ಹೆಚ್.ವಿಶ್ವನಾಥ್ ತಿರುಕನ ಕನಸು ಕಾಣುತ್ತಿದ್ದಾರೆ. ಸಿಎಂ ಆಗಲು ಕೋಟ್ ಹೊಲಿಸಿಕೊಂಡು ತಿರುಕನ ಕನಸು ಕಾಣುತ್ತಿದ್ದಾರೆ ಯತ್ನಾಳ್ ಎಂದು ಸಿಎಂ ಭೇಟಿ ಬಳಿಕ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

error: Content is protected !!