ಬೆಳಗಾವಿ: ಜಿಲ್ಲೆಯ ಸಿಂದೊಳ್ಳಿ ಗ್ರಾಮದ ಇಂಡಾಲ ನಗರದ ಸಮುದಾಯ ಭವನದಲ್ಲಿ, ಕೋವಿಡ್ 19 ಎರಡನೇ ಅಲೆ ಹಿನ್ನೆಲೆ ಗ್ರಾಮದ ಬಡಜನರಿಗೆ ಹಾಗೂ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ಗಳನ್ನು ಬೆಳಗಾವಿ ಲೋಕಸಭೆಯ ಸಂಸದೆ ಮಂಗಳಾ ಸುರೇಶ್ ಅಂಗಡಿ ಅವರು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಮಂಡಲದ ಬಿಜೆಪಿ ಅಧ್ಯಕ್ಷ ಧನಂಜಯ ಜಾಧವ, ದೀಪಾ ಕುಡಚಿ, ಗ್ರಾಮ ಪಂಚಾಯತ್ ಅಧ್ಯಕ್ಷ ಮಿಲನ ಮೌನೇಶ್, ಅಧಿಕಾರಿಗಳಾದ ರಮೇಶ್ ಕೆ. ಗ್ರಾ.ಪಂ. ಸದಸ್ಯ ಸತೀಶ್ ಶಹಾಪೂರ, ವೀರಭದ್ರಯ್ಯ ಪೂಜಾರಿ, ರವಿ ಕೊಟಬಾಗಿ ಸೇರಿದಂತೆ ಕಾರ್ಮಿಕರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.