ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕರೆ ನೀಡಿರುವ ಉಚಿತ ಕೋವಿಡ್ ಲಸಿಕಾ ಅಭಿಯಾನಕ್ಕೆ ಬೆಳಗಾವಿಯಲ್ಲಿ 29 ಕಡೆಗಳಲ್ಲಿ ಚಾಲನೆ ನೀಡಿದರು. ಬೆಳಗಾವಿ ನಗರದ ಚವಾಟ್ ಗಲ್ಲಿಯಲ್ಲಿ ಇರುವ ಮಾರುತಿ ಮಂಗಲ ಕಾರ್ಯಾಲಯದಲ್ಲಿ 18 ವರ್ಷ ಮೇಲ್ಪವರಿಗೆ ಉಚಿತವಾಗಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಇಡಿ ಜಗತ್ತಿನಲ್ಲಿಯೇ ನಮ್ಮ ದೇಶದಲ್ಲಿ ಅತೀ ದೊಡ್ಡ ಪ್ರಮಾಣದ ಲಸಿಕಾ ಕಾರ್ಯಕ್ರಮ ಮಾಡಲಾಗುತ್ತಿದೆ. ಪ್ರಧಾನಿ ಶ್ರೀ ಮೋದಿ ಅವರು ಹೇಳಿರುವ ಪ್ರಕಾರ 18 ವರ್ಷ ಮೇಲ್ಪವರಿಗೆ ಲಸಿಕೆ ನೀಡಲಾಗುತ್ತಿದೆ. ಇಡಿ ಜಗತ್ತಿಗೆ ಮಾದರಿ ಎಂಬಂತೆ ನಮ್ಮ ದೇಶಗಳಲ್ಲಿ ಲಸಿಕಾ ಅಭಿಯಾನ ಶುರುವಾಗಿದೆ. ಲಸಿಕಾಕರಣ, ಸಾಮಾಜಿಕ ಅಂತರ ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು. ಬೆಳಗಾವಿ ಉತ್ತರ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಲಸಿಕೆ ನೀಡಲಾಗಿದೆ. ಈಗಾಗಲೇ 65 ಸಾವಿರಕಿಂತ್ತಲು ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ. ಬರುವ ದಿನಗಳಲ್ಲಿ 100% ಲಸಿಕಾ ಅಭಿಯಾನ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.
ಈ ವೇಳೆ ಸಂಸದೆ ಶ್ರೀಮತಿ ಮಂಗಳಾ ಅಂಗಡಿ, ಮಹಾನಹರ ಪಾಲಿಕೆ ಆಯುಕ್ತ ಶ್ರೀ ಜಗದೀಶ್ ಕೆ.ಹೆಚ್, ತಹಶಿಲ್ದಾರ ಶ್ರೀ ಆರ್. ಕೆ ಕುಲಕರ್ಣಿ, ಜಿಲ್ಲಾ ಆರೋಗ್ಯಾಧಿಕಾರಿ ಶ್ರೀ ಎಸ್.ಬಿ ಮುನ್ಯಾಳ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಶ್ರೀ ಗಡಾದ, ಪಾಲಿಕೆಯ ಆರೋಗ್ಯಧಿಕಾರಿ ಶ್ರೀ ಸಂಜಯ ಡುಮಗೊಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.