ರಾಯಚೂರು: ಜಿಲ್ಲೆಯ ಮುದಗಲ್ ಗ್ರಾಮದ ಸಮೀಪದ ಹಲ್ಕಾವಟಗಿ ಗ್ರಾಮದ ಮೇವಿನ ಬಣವೆಯಲ್ಲಿ ಹಸುಗೂಸು ಪತ್ತೆಯಾದ ಘಟನೆ ಬುಧವಾರ ಜರುಗಿದೆ.
ಕನಿಕರವಿಲ್ಲದೇ ಗಂಡು ಮಗುವನ್ನ ಬಣವೆಯಲ್ಲಿ ಬಿಸಾಕಿ ಹೋಗಿದ್ದಾರೆ. ಗ್ರಾಮಸ್ಥರು ಬಹಿರ್ದೆಸೆಗೆ ಹೋಗಿದ್ದಾಗ ಮಗುವಿನ ಅಳುವು ಕೇಳಿಸಿದೆ.
ಹುಲ್ಲಿನಲ್ಲಿ ಬಿದ್ದ ನವಜಾತ ಶಿಶುವನ್ನ ಗ್ರಾಮದ ಕಡೆ ತಂದು ಆರೈಕೆ ಮಾಡಿದರು. ಗ್ರಾಮಸ್ಥರು ನವಜಾತ ಶಿಶು ಸಿಕ್ಕ ಬಗ್ಗೆ ಲಿಂಗಸುಗೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ ಮುದಗಲ್ ಠಾಣೆಗೆ ಪೊಲೀಸರು ಮಾಹಿತಿ ನೀಡಿದರು.
ಮುದಗಲ್ ಸಮುದಾಯ ಆರೋಗ್ಯ ಕೇಂದ್ರದ 108 ವಾಹನದಲ್ಲಿ ನವಜಾತ ಶಿಶುವನ್ನು ಲಿಂಗಸುಗೂರು ಆಸ್ಪತ್ರೆಗೆ ತಂದು ಚಿಕಿತ್ಸೆ ನೀಡಿದರು. ಈ ಕುರಿತು ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುತ್ತೇವೆ. ಶಿಶು ಆರೋಗ್ಯದ ಸ್ಥಿತಿಗತಿ ನೋಡಿಕೊಂಡು, ನಂತರ ಬಳ್ಳಾರಿ ಶಿಶುಪಾಲನ ಕೇಂದ್ರಕ್ಕೆ ಬಿಡುತ್ತೇವೆ ಎಂದು ಶಿಶು ಅಭಿವೃದ್ಧಿ ಅಧಿಕಾರಿ ಶರಣಮ್ಮ ಕಾರನೂರು ತಿಳಿಸಿದರು.