ಮಾವಿನ ಹಣ್ಣಿನ ಮರವನ್ನು ಎರಿ ಕುಳಿತ ಕೋತಿಗಳು ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ನಿಂತರೂ, ಕೂಡ ನೀರಿನ ಪ್ರಮಾಣವು ನೀಲುತ್ತಿಲ್ಲಾ. ಇನ್ನೂ ವರದಾ ನದಿಯ ಪ್ರವಾಹದಲ್ಲಿ ಕೋತಿಗಳ ಗುಂಪೊಂದು ಸಿಲುಕಿಕೊಂಡು ಪರದಾಡುತ್ತಿರುವ ಘಟನೆಯು ಹಾವೇರಿ ತಾಲೂಕಿನ ಹಂದಿಗನೂರು ಗ್ರಾಮದಲ್ಲಿ ಸಂಭವಿಸಿದೆ. ಇನ್ನೂ ಮರದ ಸುತ್ತ ಮುತ್ತಲು ನೀರು ಆವರಿಸಿರುವುದರಿಂದ ಮಾವಿನ ಹಣ್ಣಿನ ಮರದಲ್ಲಿ ಕುಳಿತ ಕೋತಿಗಳು ದಿಕ್ಕು ದೋಚದೆ ಪರದಾಡುತ್ತಿವೆ. ಇನ್ನೂ ಗ್ರಾಮದ ಬಳಿ ಇರುವ ಮಾವಿನ ಮರ ಒಂದರಲ್ಲಿ ಕೋತಿಗಳ ಗುಂಪು ಬಿಡಾರ ಹೂಡಿದ್ದ ವೇಳೆಯಲ್ಲಿ ಏಕಾ ಏಕಿ ವರದಾ ನದಿಯ ಪ್ರವಾಹ ಎದುರಾಗಿದೆ.
ಇನ್ನೂ ಮಾವಿನ ಮರದ ಸುತ್ತಲೂ ನೀರು ಆವರಿಸಿಕೊಂಡಿದ್ದರಿಂದ ಮಾವಿನ ಮರದಲ್ಲಿ ಸಿಲುಕಿ ಹತ್ತಕ್ಕೂ ಹೆಚ್ಚು ಕೋತಿಗಳು ಪರದಾಡುತ್ತಿವೆ. ಜೊತೆಗೆ ನೀರಿನ ಹರಿವು ಹೆಚ್ಚಾಗಿ ಇರುವುದರಿಂದ ಮರದ ಬಳಿ ಹೋಗಿ ವಾನರ ಸೇನೆಗೆ ಹಣ್ಣು ಹಂಪಲು ನೀಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಕೋತಿಗಳನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ. ಎನು ಮಾಡಬೇಕೆಂದು ತಿಳಿಯದೆ ಮರದಲ್ಲಿನ ಕೋತಿಗಳು ಮಾವಿನ ಗಿಡದ ಸೊಪ್ಪನ್ನು ತಿಂದು ಕಾಲ ಕಳೆಯುತ್ತಿವೆ.