ವಿಜಯಪುರ: ಮಹಾರಾಷ್ಟ್ರದಲ್ಲಿ ಕೋವಿಡ್ ೩ನೇ ಅಲೆ ರುದ್ರ ತಾಂಡವ ಮಾಡುತ್ತಿದೆ. ಇದರಿಂದ ಮಹಾರಾಷ್ಟ್ರಕ್ಕೆ ಗಡಿ ಹಂಚಿಕೊಂಡಿರುವ ವಿಜಯಪುರದಲ್ಲಿ ಇವಾಗ ಭಯ ಶುರುವಾಗಿದೆ.
ಮಹಾರಾಷ್ಟ್ರ ಗಡಿಯಾದ ವಿಜಯಪುರದ ಕೆಲವು ಹಳ್ಳಿಗಳಲ್ಲಿ ಈ ಸಲ ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಜಿಲ್ಲಾಡಳಿತದ ನಿಷೇಧದ ನಡುವೆಯೂ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚವಡಿಹಾಳ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ.
ಇನ್ನೂ ಕೋವಿಡ್ ೩ನೇ ಅಲೆಯನ್ನು ತಡೆಯಲು ಜಿಲ್ಲಾಡಳಿತ ಮೊಹರಂ ಹಾಗೂ ಇತರೆ ಆಚರಣೆಗೆ ನಿಷೇಧಿಸಿದೆ. ಆದ್ರೂ ನಿಷೇಧಕ್ಕೆ ಕ್ಯಾರೆ ಅನ್ನದ ಜನರು ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಹೆಚ್ಚು ಸಂಖ್ಯೆಯಲ್ಲಿ ಜನರನ್ನು ಸೇರಿಸಿ, ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನು ಕಾಪಾಡದೇ ಬೇಕಾ ಬಿಟ್ಟಿಯಾಗಿ ನಡೆದುಕೊಂಡಿದ್ದಾರೆ. ನಿಷೇಧದ ನಡುವೆಯೂ ಈ ರೀತಿಯಾಗಿ ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ರು ಕೂಡಾ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಯಾವುದೇ ರೀತಿಯ ಕ್ರಮವನ್ನು ತೇಗೆದುಕೊಳ್ಳಲಿಲ್ಲ. ಎಂಬ ಪ್ರಶ್ನೆ ಈಗಾ ಎಲ್ಲೇಡೆ ಶುರುವಾಗಿದೆ.