ಕೂಗು ನಿಮ್ಮದು ಧ್ವನಿ ನಮ್ಮದು

ಚಿಕ್ಕೋಡಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಾಮಗಾರಿ ಶೀಘ್ರದಲ್ಲೇ ಮುಗಿಸುವಂತೆ ಅಧಿಕಾರಿಗಳಿಗೆ ಪರಿಷತ್ ಸದಸ್ಯ ಕವಟಗಿಮಠ ಸೂಚನೆ

ಬೆಳಗಾವಿ: ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಜಂಟಿ ಸಹಯೋಗದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ 2017 ರಲ್ಲಿ ಮಂಜೂರಾತಿಯಾದಂತ ಆಸ್ಪತ್ರೆ ಒಟ್ಟು ಈ ಯೋಜನೆಗೆ ಪ್ರತಿಶತ 60% ಕೇಂದ್ರ ಸರ್ಕಾರದ ಸಹಾಯ ಮತ್ತು 40% ಕರ್ನಾಟಕ ರಾಜ್ಯ ಸರ್ಕಾರದ ಸಹಾಯಧನದಲ್ಲಿ ಈ ಯೋಜನೆ ರೂಪುಗೊಂಡಿದ್ದು ವಿಶೇಷವಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯೆಂದು ಕರೆಯಲ್ಪಡುವ ಈ ಯೋಜನೆಗೆ 2017 ರಲ್ಲಿ ಮಂಜೂರಾತಿ ದೊರೆತಿದ್ದು 2018 ರಲ್ಲಿ ಈ ಯೋಜನೆಗೆ ಟೆಂಡರ್ ನೀಡಲಾಗಿದ್ದು 18 ತಿಂಗಳ ಅವಧಿಯಲ್ಲಿ ಈ ಕಾಮಗಾರಿ ಪೂರ್ತಿಗೊಳಿಸಬೇಕಾಗಿತ್ತು ಆದರೆ ಇಲ್ಲಿಯವರೆಗೂ ಸುಮಾರು 24 ತಿಂಗಳುಗಳ ಕಾಲ ಈ ಕಾಮಗಾರಿ ಸಂಪೂರ್ಣಗೊಳ್ಳದೆ ನಿಧಾನಗತಿಯಾಗಿದ್ದು ಭೇಟಿ ಕೊಟ್ಟು ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಇನ್ನು ಮೂರು ತಿಂಗಳಲ್ಲಿ ಕಾಮಗಾರಿ ಸಂಪೂರ್ಣವಾಗಿ ಮುಗಿಸಿ ಸಾರ್ವಜನಿಕ ಲೋಕಾರ್ಪಣೆ ಮಾಡಬೇಕೆಂಬ ಆದೇಶವನ್ನು ನೀಡಲಾಯಿತು.

ಈ ಯೋಜನೆಯಿಂದ ಬಡ ಹೆಣ್ಣು ಮಕ್ಕಳಿಗೆ ಮತ್ತು ವಿಶೇಷವಾಗಿ ಹೆರಿಗೆ ಆಸ್ಪತ್ರೆಯೆಂದು ಹೇಳಬಹುದು ತಾಯಿ ಮತ್ತು ಮಕ್ಕಳ ಅರೋಗ್ಯ ಹಿತದೃಷ್ಟಿಯಿಂದ ನಿರ್ಮಾಣಗೊಳ್ಳುವ ಆಸ್ಪತ್ರೆ ಸುಮಾರು ನೂರು ಹಾಸಿಗೆಯುಳ್ಳ ವಿಶೇಷವಾದ ಹೆರಿಗೆ ಕೊನೆ, ಎರಡು OT ಕೊಠಡಿ, ವೈದ್ಯರಿಗೆ ಹಾಗೂ ನರ್ಸ್ ಗಳಿಗೂ ಸಹ ಇರಲು ಕ್ವಾರ್ಟರ್ಸ್ ನಿರ್ಮಾಣ ಮಾಡಲಾಗಿದ್ದು ತುಂಬಾ ಅತ್ಯಾದುನಿಕ ಆಸ್ಪತ್ರೆ ಇದಾಗಿದ್ದು ಈ ಆಸ್ಪತ್ರೆಯಿಂದ ಬಡ ಹೆಣ್ಣು ಮಕ್ಕಳ ಆರೋಗ್ಯಕ್ಕೆ ಸಹಕಾರಿಯಾಗಲಿದ್ದು ವಿಶೇಷವಾಗಿ ಚಿಕ್ಕೋಡಿ ತಾಲೂಕಿಗೆ ಈ ಯೋಜನೆ ಮಂಜೂರಾಗಿರುವ ಯೋಜನೆ ಆದಷ್ಟು ಬೇಗ ಕಾಮಗಾರಿ ಮುಗಿದು ಸಾರ್ವಜನಿಕರಿಗೆ ಅನುಕೂಲವಾಗುವ ಹಿತದೃಷ್ಟಿಯಿಂದ ಇವತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭೆ ಕರೆದು ಈ ಯೋಜನೆಯನ್ನು ಮೂರು ತಿಂಗಳಲ್ಲಿ ಕಾಮಗಾರಿ ಸಂಪೂರ್ಣವಾಗಿ ಮುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಸೂಚಿಸಿದ್ದಾರೆ.

error: Content is protected !!