ಕೂಗು ನಿಮ್ಮದು ಧ್ವನಿ ನಮ್ಮದು

ಆನಂದ ಮಾಮನಿಗೆ ಸಚಿವ ಸ್ಥಾನ‌ ನೀಡುವಂತೆ ಅಭಿಮಾನಿಗಳು, ಬೆಂಬಲಿಗರಿಂದ ಪ್ರತಿಭಟನೆ

ಬೆಳಗಾವಿ: ವಿಧಾನಸಭೆಯ ಉಪಸಭಾಧ್ಯಕ್ಷ ಆನಂದ ಮಾಮನಿ ಅವರಿಗೆ ಸಚಿವ ಸ್ಥಾನ‌ ನೀಡುವಂತೆ ಅಭಿಮಾನಿಗಳು, ಬೆಂಬಲಿಗರು ಪ್ರತಿಭಟನೆ ಮಾಡಿ ಆಗ್ರಹಿಸುತ್ತಿದ್ದಾರೆ. ಸತತ ಮೂವರು ಬಾರಿ ಸವದತ್ತಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಕೊಂಡ ಆನಂದ ಮಾಮನಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ‌ ಬೆನಕಟ್ಟಿಯಲ್ಲಿ ರಸ್ತೆ ತಡೆದು ಅಭಿಮಾನಿಗಳು, ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಸವದತ್ತಿ ತಾಲೂಕಿಗೆ ಅನ್ಯಾಯ ಮಾಡದೇ ಸಚಿವ ಸ್ಥಾನ ನೀಡಿ. ಸಚಿವ ಸ್ಥಾನ ನೀಡದಿದ್ರೆ ಉಗ್ರ ಹೋರಾಟ ಮಾಡುವುದಾಗಿ ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ. ಇನ್ನು ಸಚಿವ ಸ್ಥಾನ ನೀಡದಿದ್ರೆ ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ಆನಂದ ಮಾಮನಿ ಅವರು ಸಹ ಬೆದರಿಕೆಯೊಡ್ಡಿದ್ದಾರೆ.

error: Content is protected !!