ಬೆಳಗಾವಿ – 2021-2022 ನೇ ಸಾಲಿನ ಸಮಗ್ರ ಕೃಷಿ ಅಭಿಯಾನಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹಿಂಡಲಗಾ ಗ್ರಾಮದ ಶ್ರೀ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡಿದರು.
ಈ ಕೃಷಿ ಅಭಿಯಾನವು ಸಮಗ್ರ ಕೃಷಿ ಅಭಿಯಾನದ ರಥವನ್ನು ಒಳಗೊಂಡಿದ್ದು, ಈ ರಥ ಗ್ರಾಮ -ಗ್ರಾಮಗಳಿಗೆ ತೆರಳಿ ಕೃಷಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡುತ್ತದೆ. ಸಮಗ್ರ ಕೃಷಿ ಅಭಿಯಾನವು ರೈತರಿಗೆ ಪೂರಕವಾಗಿದ್ದು, ಗೊಬ್ಬರ, ಬೀಜಗಳ, ಕ್ರಿಮಿನಾಶಕಗಳ ಹಾಗೂ ರೈತರ ಜಮೀನುಗಳ ವಿಮೆಯ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೆಬ್ಬಾಳಕರ್ ವಿನಂತಿಸಿದರು.
ಈ ಸಮಗ್ರ ಕೃಷಿ ಅಭಿಯಾನ ಮೊಬೈಲ್ ಆ್ಯಪ್ ನಲ್ಲಿಯೂ ಸಹ ಲಭ್ಯವಿದ್ದು, ಆ್ಯಪ್ ನಲ್ಲಿ ರೈತರಿಗೆ ಅನುಕೂಲವಾಗುವಂತಹ ಕೃಷಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ತ್ವರಿತಗತಿಯಲ್ಲಿ ಸಿಗಲಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಆರ್ ಬಿ ನಾಯ್ಕರ್, ಕೃಷಿ ಅಧಿಕಾರಿ ಅರುಣ ಕಾಪಸೆ, ಸಹಾಯಕ ಕೃಷಿ ಅಧಿಕಾರಿ ಸಿ ಎಸ್ ನಾಯ್ಕ್, ಸ್ಥಳೀಯ ಜನ ಪ್ರತಿನಿಧಿಗಳು, ಚೇತನ ಅಗಸ್ಗೆಕರ್, ರೋಹನ್ ಪಾವಸೆ, ವಿಠ್ಠಲ ದೇಸಾಯಿ, ರಾಮಚಂದ್ರ ಕುದ್ರೆಮನಿ, ಅಶೋಕ ಕಾಂಬಳೆ, ರೇಣುಕಾ ಬಾತ್ಕಂಡೆ, ಅಲ್ಕಾ ಕಿತ್ತೂರ, ಬಾಗಣ್ಣ ನರೋಟಿ, ಗಜಾನನ ಬಾಂಡೆಕರ್, ಯಲ್ಲಪ್ಪ ಕಾಕತ್ಕರ್, ಪ್ರಕಾಶ ಬೆಳಗುಂದ್ಕರ್, ಗಜು ಕಾಕತ್ಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.