ಕೂಗು ನಿಮ್ಮದು ಧ್ವನಿ ನಮ್ಮದು

ನಾನು ರಾಜಕೀಯದ ಬಗ್ಗೆ ಏನೂ ಮಾತನಾಡಲ್ಲ: ಶಾಸಕ ಅರವಿಂದ ಬೆಲ್ಲದ

ಧಾರವಾಡ: ನಾನು ರಾಜಕೀಯದ ಬಗ್ಗೆ ಏನೂ ಮಾತನಾಡಲ್ಲ. ಏನೇ ಇದ್ದರೂ ನಮ್ಮ ಪಕ್ಷದ ನಾಲ್ಕು ಗೊಡೆಗಳ ಮಧ್ಯೆ ಮಾತಾಡುತ್ತೇನೆ ಎಂದು ಶಾಸಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ. ಜೈಲಿನಿಂದ ಕೈದಿಯೊಬ್ಬ ಕರೆ ಮಾಡಿರುವ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಯುವರಾಜ್ ಎನ್ನುವವನ ಬಗ್ಗೆ ನಾನು ಹೇಳುವುದೆಲ್ಲ ಹೇಳಿದ್ದೇನೆ, ಉಳಿದದ್ದೆಲ್ಲವನ್ನು ಪೊಲೀಸರು ತನಿಖೆ ಮಾಡ್ತಾರೆ ಎಂದಿದ್ದಾರೆ. ಸುತ್ತೂರು ಮಠಕ್ಕೆ ನಾನು ಸುತ್ತೂರು ಗುರುಗಳ ತಾಯಿ ಲಿಂಗೈಕ್ಯ ಆಗಿದ್ದಕ್ಕೆ ಭೇಟಿ ಮಾಡಿದ್ದು, ಲಿಂಗೈಕ್ಯ ಆದ ಸಂದರ್ಭದಲ್ಲಿ ನನಗೆ ಅಲ್ಲಿಗೆ ಹೋಗುವುದಕ್ಕೆ ಆಗಿರಲಿಲ್ಲ. ಬೆಂಗಳೂರಿನಿಂದ ಬರುವಾಗ ಗುರುಗಳಿಗೆ ಹಾಗೂ ಉಳಿದವರಿಗೆ ಭೇಟಿ ಮಾಡಿ ಮಾತಾಡಿ ಬಂದಿದ್ದೆನೆ ಎಂದು ಹೇಳಿದರು.

error: Content is protected !!