ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅಧ್ಯಕ್ಷತೆಯಲ್ಲಿ ಕೆಡಿಪಿ ಪ್ರಗತಿ ಪರಿಶಿಲನಾ ಸಭೆ ಆರಂಭವಾಗಿದೆ. ಕೇವಲ ಜಿಲ್ಲೆಯ ಮೂರು ಶಾಸಕರು ಮಾತ್ರ ಸಭೆಯಲ್ಲಿ ಭಾಗಿಯಾಗಿದ್ದಾರೆ. ಧಾರವಾಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ಆರಂಭವಾಗಿದ್ರೂ ನಾಲ್ಕು ಶಾಸಕರು ಮಾತ್ರ ಸಭೆಗೆ ಹಾಜರಾಗಿಲ್ಲ. ಶಾಸಕ ಅರವಿಂದ ಬೆಲ್ಲದ, ಶಾಸಕ ಪ್ರಸಾದ ಅಬ್ಬಯ್ಯ, ಜಗದೀಶ್ ಶೆಟ್ಟರ್, ಶಂಕರ ಪಾಟೀಲ ಮುನೇನಕೊಪ್ಪ ಕ್ಷೆತ್ರಗಳ ಬಗ್ಗೆ ಮಾಹಿತಿಯನ್ನ ಉಸ್ತುವಾರಿ ಸಚಿವರ ಮುಂದೆ ಇಡಬೇಕಿತ್ತು. ಆದರೆ ಶಾಸಕರು ಗೈರಾಗಿದ್ದರಿಂದ ಯಾವ ಕೆಲಸಗಳು ಕೂಡ ಅಲ್ಲಿ ಆಗಲಿಲ್ಲ.
ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಮಳೆ ಹಾನಿ, ಬೆಳೆಹಾನಿ, ವಿವಿಧ ಇಲಾಖೆಗಳ ಕಾಮಗಾರಿಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪಆಚಾರ್ಯ ಅವರು ಎಲ್ಲ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿಗಳನ್ನ ಪಡೆದುಕೊಂಡರು. ಇನ್ನು ಕೆಲ ಅಧಿಕಾರಿಗಳು ಸಭೆಗೆ ಹಾಜರಾದ್ರೆ ಇನ್ನು ಕೆಲ ಅಧಿಕಾರಿಗಳು ಕೆಡಿಪಿ ಸಭೆಗೆ ಹಾಜರಾಗಲಿಲ್ಲ.
ಅಧಿಕಾರಿಗಳ ವಿರುದ್ದ ಕಿಡಿ: ಇನ್ನು ಜಲಜಿವನ್ ಮಿಷನ್ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾಮಗಾರಿ ವಿಳಂಬವಾಗುತ್ತಿದೆ. ಪದೆ ಪದೆ ಅಧಿಕಾರಿಗಳು ವರ್ಗಾವಣೆ ಆಗುತ್ತಿರುವ ಹಿನ್ನಲೆ ಕಾಮಗಾರಿಗಳು ವಿಳಂಬವಾಗುತ್ತಿದೆ. ಸಿಸಿ ರಸ್ತೆಗಳನ್ನ ಒಡೆದು ಸರಿಯಾಗಿ ಪೈಪ್ ಲೈನ್ ಗಳನ್ನ ಅಳವಡಿಕೆ ಮಾಡುತ್ತಿಲ್ಲ. ಗುತ್ತಿಗೆದಾರರು ದಿನೆ ದಿನೆ ಪೈಪ್ ಗಳು ಕಳಪೆ ಅಳವಡಿಕೆ ಮಾಡುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಜನರಿಗೆ ಜಲಜೀವನ್ ಮಿಷನ್ ಯೋಜನೆ ಸರಿಯಾಗಿ ತಲುಪುತ್ತಿಲ್ಲ ಎಂದು ಸಚಿವ ಹಾಲಪ್ಪ ಆಚಾರ ಅಧಿಕಾರಿಗಳ ವಿರುದ್ದ ಕಿಡಿ ಕಾರಿದರು.
ಜಿಲ್ಲೆಯಲ್ಲಿ ಸಮಸ್ಯೆಗಳ ಬಗ್ಗೆ ಕಾಮಗಾರಿಗಳ ಬಗ್ಗೆ ಕೆಲ ಅಧಿಕಾರಿಗಳ ವಿರುದ್ದ ಮಾಹಿತಿಗಳಿದ್ರೆ ಇನ್ನು ಕೆಲ ಅಧಿಕಾರಿಗಳ ಕಡೆ ಮಾಹಿತಿ ಪೂರಕವಾಗಿರಲಿಲ್ಲ. ಇದಕ್ಕೆ ಸಚಿವರು ಅಧಿಕಾರಿಗಳ ಮೆಲೆ ಗರಂ ಆದರು. ಸಭೆಯುದ್ದಕ್ಕೂ ಕೆಲ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಕೇವಲ ಶಾಸಕ ಅಮೃತ ದೇಸಾಯಿ, ಶಾಸಕಿ ಕುಸುಮಾ ಶಿವಳ್ಳಿ, ಸಿಎಂ ನಿಂಬಣ್ಣವರ ಸಭೆಯಲ್ಲಿ ಭಾಗಿಯಾಗಿ ಕ್ಷೆತ್ರಗಳ ಸಮಸ್ಯೆಗಳನ್ನು ಹೇಳಿದ್ದಾರೆ. ಕೇವಲ ಅಧಿಕಾರಿಗಳ ಜೊತೆ ಸಭೆ ಮಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರು ಸಭೆಯಲ್ಲಿ ಇದ್ದ ಅಧಿಕಾರಿಗಳ ವಿರುದ್ದ ಕಿಡಿ ಕಾರಿದರು. ಜತೆಗೆ ಶಾಸಕರಿಗೆ ನೀವು ಸರಿಯಾಗಿ ಕೆಲಸವನ್ನ ತೆಗೆದುಕ್ಕೊಳ್ಳಿ ಎಂದು ಸೂಚನೆ ನೀಡಿದರು. ಸಿಇಓ ಅವರು ಸ್ಥಳ ಪರಿಶಿಲನೆ ಮಾಡಬೇಕು ಮತ್ತು ಎಲ್ಲಜೆಜೆಎಂ ಕಾಮಗಾರಿಗಳನ್ನ ಸಿಸಿಓ ಅವರು ಜಿಲ್ಲೆಯಲ್ಲಿ ಗ್ರಾಮಗಳಿಗೆ ಸಂಚರಿಸಿ ಸೂಕ್ತವಾಗಿ ಪರಿಶಿಲನೆ ನಡೆಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಸಭೆಯ ಅಧ್ಯಕ್ಷತೆಯನ್ನ ಜಿಲ್ಲಾ ಉಸ್ತುವಾರಿ ಸಚಿವ ಅಚಾರ ಹಾಲಪ್ಪ ವಹಿಸಿದ್ದರು, ಶಾಸಕ ಅಮೃತ ದೇಸಾಯಿ, ಸಿಎಂ ನಿಂಬಣ್ಣವರ,ಶಾಸಕಿ ಕುಸುಮಾ ಶಿವಳ್ಳಿ, ಜಿಲ್ಲಾ ಪಂಚಾಯತ ಸಿಇಓ ಸುರೇಶ್ ಇಟ್ನಾಳ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್ಪಿ ಲೋಕೇಶ್ ಜಗಲಾಸರ್ ಸಭೆಯಲ್ಲಿ ಉಪಸ್ಥಿತರಿದ್ದರು