ಕ್ಷೇತ್ರದ ಜನಬೆಂಬಲ ಸಾರಿ ಹೇಳುತ್ತಿದೆ ಈ ಬಾರಿ ಬಿಜೆಪಿ ಮತ್ತೊಮ್ಮೆ ಸಚಿವೆ ಶಶಿಕಲಾ ಜೊಲ್ಲೆ
ನಿಪ್ಪಾಣಿ: ಬೋರಗಾಂವ ಪಟ್ಟಣದಲ್ಲಿ, ವಿಧಾನಸಭಾ ಚುನಾವಣೆ ನಿಮಿತ್ತ ರ್ಯಾಲಿಯನ್ನು ಸಚಿವೆ ಶಶಿಕಲಾ ಜೊಲ್ಲೆಯವರು ನಡೆಸಿ, ಚುನಾವಣಾ ಪ್ರಚಾರ ಮಾಡಿದರು. ಈ ಪಟ್ಟಣದಲ್ಲಿ 100 ಕೋಟಿಗೂ ಅಧಿಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಮುಂದೆಯೂ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ಮಾದರಿ ನಿಪ್ಪಾಣಿ ಕ್ಷೇತ್ರ ನಿರ್ಮಾಣ ಮಾಡುವ ಹಂಬಲವಿದೆ. ನನ್ನ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳು ಜನರ ಮನೆ-ಮನ ತಲುಪಿದ್ದು, ಈ ಬಾರಿಯು ಚುನಾವಣೆಯಲ್ಲಿ ನನಗೆ ಮತ ನೀಡಿ, ಬಿಜೆಪಿ ಗೆಲುವಿಗೆ ಸಹಕರಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸದಸ್ಯ ಶರದ ಜಂಗಟೆ, ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರ ಬಾಂಧವರು ಉಪಸ್ಥಿತರಿದ್ದರು.