ಕೂಗು ನಿಮ್ಮದು ಧ್ವನಿ ನಮ್ಮದು

ಸದನದಲ್ಲಿ ನಾಳೆಯೂ ಧರಣಿ. ಸಚಿವ ಭೈರತಿ ಬಸವರಾಜ್ ರಾಜೀನಾಮೆ ನೀಡದಿದ್ರೆ, ಸಿಎಂ ಡಿಸ್ಮಿಸ್ ಮಾಡಬೇಕು: ಮಾಜಿ ಸಿಎಂ ಸಿದ್ದರಾಮಯ್ಯ

ಬೆಳಗಾವಿ: ನಾಳೆ ಸೋಮವಾರವೂ ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್ ಶಾಸಕರು ಪ್ರತಿಭಟನೆ ಮಾಡಲಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ನಾವು ಧರಣಿಯಲ್ಲಿದ್ದೀವಿ ಧರಣಾ ಮಾಡ್ತಿದೀವಿ ಎಂದಿದ್ದಾರೆ.

ನಮಗೆ ಅಡ್ಜರ್ಮಂಟ್ ಮೋಷನ್‌ಗೆ ಚರ್ಚೆ ಮಾಡಲು ಅವಕಾಶ ಕೊಡಲಿಲ್ಲ. ನಾವು ಬೈರತಿ ಬಸವರಾಜ ಅವರ ಮೇಲೆ ಕೋರ್ಟ್ ಆರ್ಡರ್ಸ್ ಇದೆ. ಅವರು ಮೋಸ ಮಾಡಿ, ಫೋರ್ಜರಿ ಮಾಡಿ ನಕಲಿ ಪಾರ್ಟಿಷನ್ ಡೀಡ್, ನಕಲಿ ಕ್ರಯಪತ್ರ ಕ್ರಿಯೇಟ್ ಮಾಡಿದ್ದಾರೆ. ಸೆಕ್ಷನ್ 120 (B), 420 ಚೀಟಿಂಗ್ ಪೋರ್ಜರಿ ಎಫ್ಐಆರ್ ರಿಜಿಸ್ಟರ್ ಆಗಿ ಸಮನ್ಸ್ ಕೂಡ ಜಾರಿ ಆಗಿದೆ. ಹೀಗಿರುವಾಗ ಅವರು ಸಚಿವರಾಗಿ ಹೇಗೆ ಮುಂದುವರಿಯುತ್ತಾರೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಭೈರತಿ ಬಸವರಾಜ್ ಅವರು ರಾಜೀನಾಮೆ ಕೊಡಬೇಕು. ಅವರ ಮೇಲೆ ಕ್ರಿಮಿನಲ್ ಕೇಸ್ ಇದೆ. ಆರ್ಡರ್ ಆಗಿಬಿಟ್ಟಿದೆ ಆಲ್‌ರೇಡಿ, ಅವರಿಗೆ ಸಚಿವರಾಗಿ ಮುಂದುವರಿಯಲು ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ರು.

ಇನ್ನು ಕ್ರಿಮಿನಲ್ ಕೇಸ್ ಇರೋರಿಗೆ ಸೆಲ್ಯೂಟ್ ಹೇಗೆ ಹೊಡಿತಾರೆ ಪೊಲೀಸನವರು. ಅಪರಾಧಿ ಸ್ಥಾನದಲ್ಲಿ ಇದ್ದವರಿಗೆ ಪೊಲೀಸರು ಹೇಗೆ ಸೆಲ್ಯೂಟ್ ಹೊಡೆಯೋದು ಎಂದ ಸಿದ್ದರಾಮಯ್ಯ, ಇದೇ ಬಿಜೆಪಿಯವ್ರು ಗಣಪತಿ ಕೇಸ್‌ನಲ್ಲಿ ಕೆ.ಜೆ.ಜಾರ್ಜ್ ರಾಜೀನಾಮೆಗೆ ಡಿಮ್ಯಾಂಡ್ ಮಾಡಿದ್ರು. ನಾನಿವತ್ತೂ ಏನ್ ಮಾಡಿದೀನಿ ಅದೇ ರೂಲ್ 60 ಅಡಿ ಮಾಡಿದ್ರು. ಅವತ್ತು ಎಫ್‌ಐಆರ್ ಆಗಿರಲಿಲ್ಲ. ಎಫ್‌ಐಆರ್ ಮಾಡಬೇಕು ಅಂತಾ ಕೋರ್ಟ್ ಆದೇಶ ನೀಡಿದ ತಕ್ಷಣ ಜಾರ್ಜ್ ರಾಜೀನಾಮೆ ಕೊಟ್ರು. ಒಂದ್ ಸೆಕೆಂಡ್ ಯೋಚನೆ ಮಾಡದೆ ಜಾರ್ಜ್ ರಾಜೀನಾಮೆ ಕೊಟ್ರು. ಈಗ ಇವರೂ ಮಾಡಬೇಕಲ್ಲ. ಅವರು ರಾಜೀನಾಮೆ ನೀಡದಿದ್ರೆ ಸಿಎಂ ಡಿಸ್ಮಿಸ್ ಮಾಡಬೇಕು ಎಂದರು.

ಇದೇ ವೇಳೆ ಬೆಳಗಾವಿ ಗಲಭೆ ವಿಚಾರವಾಗಿ ಮಾತನಾಡುತ್ತ, ಎಂಇಎಸ್‌ನವರು ಪುಂಡಾಟಿಕೆ ಶುರು ಮಾಡಿದ್ದಾರೆ. ಶಾಂತಿ ಕದಡಲು ಈ ತರಹ ಮಾಡ್ತಿದಾರೆ. ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಕೆಲಸ ಮಾಡಿದವರನ್ನ ಗಡಿಪಾರು ಮಾಡಿ ಜೈಲಿಗೆ ಕಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಂಇಎಸ್, ಶಿವಸೇನೆ ನಿಷೇಧ ವಿಚಾರವಾಗಿ ಮಾಧ್ಯಮ ಸ್ನೇಹಿತರ ಪ್ರಶ್ನೆಗೆ ಉತ್ತರಿಸುತ್ತ, ಅದನ್ನ ಲೀಗಲ್ ಆಗಿ ಯೋಚನೆ ಮಾಡಬೇಕು ಎಂದಿದ್ದಾರೆ.

error: Content is protected !!