ಕೂಗು ನಿಮ್ಮದು ಧ್ವನಿ ನಮ್ಮದು

ವಿಶ್ವದ ದುಬಾರಿ ಬೆಲೆಯ ಮಾವಿನ ಹಣ್ಣಿನ ಫೋಟೋ ವೈರಲ್, ಇದರ ವಿಶೇಷತೆ ಏನು ಗೊತ್ತಾ?

ನವದೆಹಲಿ: ಸಾಮಾನ್ಯವಾಗಿ ಮಾವಿನ ಹಣ್ಣು ಎಂದರೆ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ತೋತಪುರಿ, ರಸಪುರಿ, ಸೇಂದೂರ, ಬದಾಮಿ, ಇತರೆ ತಳಿಯ ಮಾವಿನ ಹಣ್ಣುಗಳನ್ನು ನೀವು ಕೇಳಿರಬಹುದು. ಆದ್ರೆ ಇದೀಗ ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಅತ್ಯಂತ ದುಬಾರಿ ತಳಿಯ ಮಾವಿನ ಹಣ್ಣಿನ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಹೌದು ಜಪಾನ್‍ನಲ್ಲಿ ಮಿಯಾಜಾಕಿ ಎಂಬ ಮಾವಿನ ತಳಿಯನ್ನು ಬೆಳೆಸಲಾಗುತ್ತದೆ. ಭಾರತದಲ್ಲಿ ಈ ಮಾವಿನ ಹಣ್ಣನ್ನು ಬೆಳೆಯುವುದು ಬಹಳ ಅಪರೂಪವಾಗಿದೆ. ಹಾಗಾಗಿ ಈ ಮಾವಿನ ಹಣ್ಣಿನ ಬೆಳೆಯನ್ನು ಹೆಚ್ಚಿಸಬೇಕು ಎಂದು ಹರ್ಷ್ ಗೋಯೆಂಕಾ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ರುಬಿ ಬಣ್ಣದ ಜಪಾನ್ ಮಿಯಾಜಾಕಿ ತಳಿಯ ಈ ಮಾವು ವಿಶ್ವದ ಅತ್ಯಂತ ದುಬಾರಿ ಮಾವು ಎಂದು ಹೇಳಲಾಗುತ್ತದೆ. ಈ ಮಾವಿನ ಹಣ್ಣಿನ ಬೆಲೆ ಪ್ರತಿ ಕೆಜಿಗೆ 2.70 ಲಕ್ಷ ರೂ. ಆಗಿದೆ. ಮಧ್ಯಪ್ರದೇಶದ ಜಬಲ್‍ಪುರದ ರೈತ ಪರಿಹಾರ್ ಅವರು ಮಿಯಾಜಾಕಿ ತಳಿಯ ಎರಡು ಮಾವಿನ ಮರಗಳನ್ನು ಬೆಳೆಸಿದ್ದು, ಈ ಮಾವನ್ನು ರಕ್ಷಿಸಲು ಮೂರು ಭದ್ರತಾ ಸಿಬ್ಬಂದಿ ಮತ್ತು 6 ನಾಯಿಗಳನ್ನು ಸಾಕಿದ್ದಾರೆ ಎಂದಿದ್ದಾರೆ. ಇದು ವಿಶ್ವದ ಅತ್ಯಂತ ದುಬಾರಿ ಹಣ್ಣುಗಳಲ್ಲಿ ಒಂದಾಗಿದೆ. ಕಳೆದ ವರ್ಷವೂ ಈ ಹಣ್ಣಿನ ಬೆಲೆ ಕಿಲೋಗ್ರಾಂಗೆ 2.70 ಲಕ್ಷಕ್ಕೆ ಮಾರಾಟವಾಗಿತ್ತು

error: Content is protected !!