ಕೂಗು ನಿಮ್ಮದು ಧ್ವನಿ ನಮ್ಮದು

ಮಲೆ ಮಹದೇಶ್ವರ ಬೆಟ್ಟದಲ್ಲಿ ಎಡವಟ್ಟು, ಲಡ್ಡು ಜೊತೆಗೆ ಭಕ್ತನ ಕೈ ಸೇರಿದ 2.19 ಲಕ್ಷ ರೂ.!

ಚಾಮರಾಜನಗರ: ಲಡ್ಡು ಜೊತೆಗೆ ೨.೧೯ ಲಕ್ಷ ರೂಪಾಯಿ ಭಕ್ತನ ಕೈ ಸೇರುವ ಮೂಲಕ ಮಲೆ ಮಹದೇಶ್ವರ ಬೆಟ್ಟದಲ್ಲಿ ಎಡವಟ್ಟು ನಡೆದಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಿಬ್ಬಂದಿ ಕಣ್ತಪ್ಪಿನಿಂದ ಪ್ರಸಾದದ ಜೊತೆಗೆ ಎರಡು ಲಕ್ಷ ರೂಪಾಯಿ ಭಕ್ತನ ಪಾಲಾಗಿದೆ. ವಿಶೇಷ ದರ್ಶನಕ್ಕೆ ಟಿಕೆಟ್ ನೀಡಲು ಕುಳಿತಿದ್ದ ಸಿಬ್ಬಂದಿ ಭಕ್ತನಿಗೆ ಲಾಡು ಜೊತೆಗೆ ಹಣದ ಚೀಲ ನೀಡಿದ್ದಾರೆ.

ಲಾಡು ಪ್ರಸಾದ ಇಟ್ಟಿದ್ದ ಬ್ಯಾಗ್ ಸಮೀಪ ಹಣವನ್ನು ಸಹ ಇಡಲಾಗಿದ್ದ ಹಿನ್ನೆಲೆ ಹಣ ಸಹಿತ ಬ್ಯಾಗ್ ಅನ್ನು ಸಿಬ್ಬಂದಿ ಭಕ್ತನಿಗೆ ನಿಡಿದ್ದಾರೆ. ಜನದಟ್ಟಣೆ ಹೆಚ್ಚಾಗಿ ಗಾಬರಿಯಲ್ಲಿ ಯಾಮಾರಿದ ಸಿಬ್ಬಂದಿ ಈ ಎಡವಟ್ಟು ಮಾಡಿದ್ದು, ವಿಚಾರ ತಿಳಿದು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಲಾಗಿದೆ. ಈ ಸಂಬಂಧ ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

error: Content is protected !!