ದುಬೈ: ಮೇಕಪ್ ಇಲ್ಲದೇ ಪತ್ನಿ ಮುಖವನ್ನು ದಿನ ನೋಡಲಾಗುತ್ತಿಲ್ಲ ಎಂದು ಈಜಿಪ್ಟಿಯನ್ ವ್ಯಕ್ತಿಯೊಬ್ಬ ವಿಚ್ಛೇದನಕ್ಕೆ ಅರ್ಜಿ ಹಾಕಿರುವ ಘಟನೆ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆದಿದೆ. ೩೪ ವಯಸ್ಸಿನ ವ್ಯಕ್ತಿ ತನ್ನ ೨೮ ವಯಸ್ಸಿನ ಪತ್ನಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ. ಪತಿಯ ವಿಚ್ಛೇದನ ನಿರ್ಧಾರದಿಂದ ಆಘಾತಗೊಂಡಿರುವ ಪತ್ನಿ ಮಾನಸಿಕ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ವಿವಾಹಗೂ ಮುನ್ನ ನನ್ನ ಹೆಂಡತಿ ತುಂಬಾ ಮೇಕಪ್ ಬಳಸುತ್ತಿದ್ದಳು. ಮೇಕಪ್ ರಹಿತವಾಗಿ ಆಕೆಯ ಮುಖವನ್ನು ನೋಡಲು ಬೇಸರವಾಗುತ್ತೆ. ಮೇಕಪ್ ಇಲ್ಲದೇ ಆಕೆ ಚೆನ್ನಾಗಿ ಕಾಣುವುದಿಲ್ಲ ಎಂದು ಪತಿ ದೂರಿದ್ದಾರೆ. ಜೊತೆಗೆ ಫ್ಯಾಮಿಲಿ ಕೋರ್ಟ್ನಲ್ಲಿ ವಿಚ್ಛೇದನಕ್ಕೆ ಅರ್ಜಿ ಕೂಡ ಹಾಕಿದ್ರು. ಇವಳು ನನಗೆ ಫೇಸ್ಬುಕ್ನಲ್ಲಿ ಪರಿಚಯವಾದಳು.
ಮೇಕಪ್ನಲ್ಲಿರುವ ಸುಂದರ ಫೋಟೊಗಳನ್ನು ಫೇಸ್ಬುಕ್ನಲ್ಲಿ ಹಂಚಿಕೊಳ್ಳುತ್ತಿದ್ರು. ಇಬ್ಬರಿಗೂ ಪರಿಚಯವಾಯಿತು. ತದನಂತರ ಇಬ್ಬರೂ ಕೆಲವು ಬಾರಿ ಭೇಟಿಯಾಗಿದ್ದೆವು. ಇವರು ಅತಿಯಾಗಿ ಮೇಕಪ್ ಮಾಡಿಕೊಳ್ಳುತ್ತಾರೆ ಎಂಬುದು ನನಗೆ ಗೊತ್ತಿರಲಿಲ್ಲ. ನಂತರ ಇಬ್ರು ವಿವಾಹವಾದೆವು. ಈಗ ಆಕೆಯನ್ನು ಮೇಕಪ್ ಇಲ್ಲದೇ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಪತಿ ಹೇಳಿದ್ದಾರೆ.