ಕೂಗು ನಿಮ್ಮದು ಧ್ವನಿ ನಮ್ಮದು

ಆಡಿಯೋ ವೈರಲ್ ನಾನು ರಾಜೀನಾಮೆ ಕೊಡೋಕೆ ಸಿದ್ಧ ಎಂದ ಸಚಿವ ಮಾಧುಸ್ವಾಮಿ   

ತುಮಕೂರು: ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಆಡಿಯೋ ಬಾರಿ ವೈರಲ್ ಆಗಿದೆ. ಈ ಬೆನ್ನಲ್ಲೇ ಮಾಧುಸ್ವಾಮಿ  ತಮ್ಮ ವೈರಲ್ ಆಡಿಯೋ ಕುರಿತು ಸ್ಪಷ್ಟನೆ ನೀಡಿದ್ದಾರೆ. ನಾನು ಅಧಿಕಾರಕ್ಕಾಗಿ ಅಂಟಿಕೊಂಡು ಕೊಡುವವನಲ್ಲ. ನನಗೆ ರಾಜೀನಾಮೆ ಕೊಡಿ ಎಂದರೆ ನಾನು ಈಗಲೇ ಕೊಡುತ್ತೇನೆ. ನಾನು ರಾಜೀನಾಮೆ ನೀಡೋಕೆ ಸದಾ ಸಿದ್ಧ ಎಂದಿದ್ದಾರೆ ಮಾಧುಸ್ವಾಮಿ 

ನನ್ನನ್ನು ಹೀಗೆಲ್ಲ ಸುದ್ದಿ ಮಾಡುವ ಅವಶ್ಯಕತೆ ಇಲ್ಲ. ನಾನು ಬಿಜೆಪಿ ಪುರದಲ್ಲಿ ಆರಾಮಾಗಿದ್ದೇನೆ. ಪ್ರೈವೇಟ್ ಆಗಿ ಇಬ್ಬರು ಮಾತನಾಡುವುದೇ ತಪ್ಪಾ, ಅವನು ಅನುಮತಿ ಇಲ್ಲದೆ ತಪ್ಪು ಮಾಡಿದ್ದಾನೆ. ಮೂರನೆಯವನು ಬೇನಾಮಿ. ಇದನ್ನು ಇಷ್ಟು ದೊಡ್ಡದು ಮಾಡಬಾರದು ಎಂದಿದ್ದಾರೆ ಮಾಧುಸ್ವಾಮಿ ಇನ್ನೂ ಸರ್ಕಾರ ನಡೆಯುತ್ತಿಲ್ಲ. 

8 ತಿಂಗಳು ಕಾಲ ಹಾಕಿದರೆ ಸಾಕೆಂಬ ಕಾರಣಕ್ಕೆ ಕೆಲವನ್ನು ಮ್ಯಾನೇಜ್ ಮಾಡುತ್ತಿದ್ದೇವೆ. ಸಚಿವ ಮಾಧುಸ್ವಾಮಿ ಅವರದ್ದು, ಎನ್ನಲಾದ ಆಡಿಯೋ ಕುರಿತಂತೆ ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಮಾಧುಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಮುನಿರತ್ನ ಆಗ್ರಹಿಸಿದ್ದಾರೆ.

error: Content is protected !!