ಕೂಗು ನಿಮ್ಮದು ಧ್ವನಿ ನಮ್ಮದು

ಗೌರವಯುತ ರಾಜಕಾರಣ ಮಾಡುತ್ತೇನೆ, ಇಲ್ಲ ನಿವೃತ್ತಿ ಪಡೆಯುತ್ತೇನೆ: ಎಂ.ಪಿ ರೇಣುಕಾಚಾರ್ಯ

ನವದೆಹಲಿ: ನಾನು ಗೌರವಯುತವಾಗಿ ರಾಜಕಾರಣವನ್ನು ಮಾಡುತ್ತೇನೆ. ಇಲ್ಲದಿದ್ದಲ್ಲಿ ನಿವೃತ್ತಿ ಪಡೆಯುತ್ತೇನೆ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಹೇಳಿದ್ರು. ಇನ್ನೂ ಮಾದ್ಯಮ ಒಂದರಲ್ಲಿ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ ಅವರು ಬಂಡಾಯ ಏಳಲ್ಲ,ಅಸಮಾಧಾನವನ್ನು ನಾನು ಯಾವತ್ತಿಗೂ ವ್ಯಕ್ತಪಡಿಸೋಲ್ಲ ಎಂದು ಹೇಳಿದ್ದಾರೆ.

ಇನ್ನೂ ಸಚಿವ ಸಂಪುಟ ರಚನೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ದೆಹಲಿಯಲ್ಲಿ ಯಾವುದೇ ನಾಯಕರನ್ನು ಭೇಟಿ ಮಾಡಲ್ಲ. ಜೊತೆಗೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ ನಾನು ಬಂದಿದ್ದೇನೆ. ಇನ್ನೂ ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೇನೆ. ಜೊತೆಗೆ ಅವಕಾಶ ಎನಾದ್ರು ಸಿಕ್ರೆ ವರಿಷ್ಠರನ್ನು ಸಹ ನಾನು ಭೇಟಿ ಮಾಡುತ್ತೇನೆ. ಜೊತೆಗೆ ಬಿ.ಎಸ್.ಯಡಿಯೂರಪ್ಪನವರ ಬಣದಲ್ಲಿ ಇದ್ದಿದ್ದಕ್ಕೆ ಮಂತ್ರಿಗಿರಿ ತಪ್ಪಿಲ್ಲ ಎಂದ್ರು.

ಇನ್ನೂ ಬಿ.ಎಸ್.ಯಡಿಯೂರಪ್ಪನವರು BJPಯ ಪ್ರಮುಖ ನಾಯಕರು. ಜೊತೆಗೆ ಸಚಿವ ಸ್ಥಾನವನ್ನು ನೀಡಬೇಕು ಎಂಬುದು ಕ್ಷೇತ್ರದ ಜನರ ಆಸೆ ಆಗಿತ್ತು. ಇನ್ನೂ ಮಂತ್ರಿ ಆಗದಿದ್ದರೇನು? ಶಾಸಕನಾಗಿದ್ದೇನೆ, ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದ್ರು. ಜೊತೆಗೆ ಇದೇ ವೇಳೆ ಸಚಿವ ಆನಂದ್ ಸಿಂಗ್ ರಾಜೀನಾಮೆ ಕುರಿತು ಮಾತನಾಡಿದ ರೇಣುಕಾಚಾರ್ಯ ಅವರು, ಸಚಿವರ ಜೊತೆಗೆ ಮಾತನಾಡುತ್ತೇನೆ. ಅವರು ನಮ್ಮ ಸ್ನೇಹಿತರು, ಸಿಎಂ ಮತ್ತು ಬಿಎಸ್‍ವೈ ಎಲ್ಲರೂ ಮಾತನಾಡಿದ್ದಾರೆ, ಜೊತೆಗೆ ನಾವೂ ಮಾತಾಡುತ್ತೇವೆ ಎಂದು ಹೇಳಿದ್ರು.

error: Content is protected !!