ಕೂಗು ನಿಮ್ಮದು ಧ್ವನಿ ನಮ್ಮದು

ಸಿಡಿ ಇದೆ ಎಂದು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ: ಶಾಸಕ ರೇಣುಕಾಚಾರ್ಯ

ಬೆಂಗಳೂರು: ಭಾರತಿಯ ಜನತಾ ಪಾರ್ಟಿಯಲ್ಲಿ ಇದೀಗಾ ಸಂಪುಟ ಸರ್ಕಸ್ ಜೋರಾಗಿ ನಡೆಯುತ್ತಿದೆ. ಜೊತೆಗೆ ಮಂತ್ರಿಗಿರಿಗಾಗಿ ಪೈಪೋಟಿ, ಹಾಗೂ ಮನ ಓಲೈಕೆ ಜೋರಾಗಿ ನಡೆಯುತ್ತಿದೆ. ಇದರ ನಡುವೆ ಬಿ.ಎಸ್.ವೈ ವಿರುದ್ಧ ಧ್ವನಿ ಎತ್ತಿದ್ದ BJP ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ರವರ ಕೈ ಮೇಲಾಗಿದೆ. ಇನ್ನೂ ಬಿ.ಎಸ್ ಯಡಿಯೂರಪ್ಪನವರ ವಿರುದ್ಧ ಹರಿಹಾಯ್ದಿದ್ದ ಯತ್ನಾಳ್ ಮುಖ್ಯಮಂತ್ರಿ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಇನ್ನೂ ಇದರ ಮಧ್ಯೆಯೇ ಸಚಿವಾಕಾಂಕ್ಷಿಯಾಗಿರುವ ಬಿ.ಎಸ್.ಯಡಿಯೂರಪ್ಪನವರ ಆಪ್ತ ಶಾಸಕ ರೇಣುಕಾಚಾರ್ಯರವರು ಯತ್ನಾಳ್ ವಿರುದ್ಧ ಕೆಂಡ ಕಾರಿದ್ದಾರೆ.

ಜೊತಗೆ ನೀವು JDS ಹೋಗಿದ್ರಲ್ಲ, ಅವತ್ತು ಹಿಂದುತ್ವ ಎಲ್ಲಿ ಹೋಗಿತ್ತು. ಸ್ವಾರ್ಥಕ್ಕಾಗಿ ಹಿಂದುತ್ವ ಬೇಕಾ? JDS ನಲ್ಲಿದ್ದಾಗ ಅಲ್ಪಸಂಖ್ಯಾತರ ಓಲೈಕೆ ಮಾಡಿಲ್ವಾ ಎಂದು ಯತ್ನಾಳ್ ವಿರುದ್ಧವಾಗಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ಇನ್ನೂ
BJP ಬಗ್ಗೆ ಮಾತನಾಡಿದ್ರೆ ಪಕ್ಷಕ್ಕೆ ಅವಮಾನ, ಪಕ್ಷ ಇದನ್ನು ಗಮನಿಸಿ ಕ್ರಮ‌ ಕೈಗೊಳ್ಳಬೇಕು ಎಂದು ಹೇಳಿದರು. ಇನ್ನೂ ಸ್ವಾಮೀಜಿಗಳು ಬಿ.ಎಸ್ ಯಡಿಯೂರಪ್ಪ ಪರ‌ ಸಮಾವೇಶ ಮಾಡಿಲ್ಲ. ಜೊತೆಗೆ ಅರಮನೆ ಮೈದಾನದಲ್ಲಿ ಸ್ವಾಮೀಜಿಗಳು ಸಹ ಹೇಳಿದ್ದಾರೆ,ಸ್ವಾಮೀಜಿಗಳು ಮನೆಗೆ ಬಂದಾಗ ಕಾಣಿಕೆ ನೀಡುವುದು ಸಂಸ್ಕೃತಿ.

ಜೊತೆಗೆ ಕಾಣಿಕೆಯಿಂದಲೇ ಸ್ವಾಮೀಜಿಗಳು ಶಾಲೆ,ಕಾಲೇಜು ನಡೆಸುತ್ತಾರೆ. ಇನ್ನೂ ಯತ್ನಾಳ್ ಆ ಬಗ್ಗೆ ಮಾತನಾಡುವ ಮೂಲಕ ಮಠಾಧೀಶರಿಗೆ ಅವಮಾನ ಮಾಡಿದ್ದಾರೆ. ಇನ್ನೂ ಬೇಷರತ್ ಕ್ಷಮೆ‌ ಕೇಳಬೇಕು ಎಂದು ರೇಣುಕಾಚಾರ್ಯರವರು ಆಗ್ರಹಿಸಿದ್ರು. ಇನ್ನೂ ರೇಣುಕಾಚಾರ್ಯ ವಿಡಿಯೋ ಇದೆ ಎಂದು ಯಾರೋ ಪುಣ್ಯಾತ್ಮ ಬ್ಲಾಕ್ ಮೇಲೆ ಮಾಡ್ತಿದ್ದಾರಂತೆ. ಹಾಗಾಗಿ ನಾನು ತಡೆಯಾಜ್ಞೆ ನೋಡುತ್ತಿದ್ದೇನೆ . ಜೊತೆಗೆ ನಾನು ಯಾವುದೇ ತಪ್ಪು ಕೂಡ ಮಾಡಿಲ್ಲ, ನನ್ನ ವಿರುದ್ಧವಾಗಿ ಯಾರೊ ಷಡ್ಯಂತ್ರ ಮಾಡುತ್ತಿದ್ದಾರೆ.

ನಾನು ಯಾವುದನ್ನ ಬೇಕಾದರ್ರು ಎಡಿಟ್ ಮಾಡಬಹುದು. ಜೊತೆಗೆ ಯಾರದ್ದೂ ಮುಖವನ್ನು ಯಾರಿಗೂ ಜೋಡಿಸಬಹುದು. ಹಾಗೆ ಯಾರದ್ದೋ ಕಾಲು, ಯಾರದ್ದೋ ದೇಹ ಗ್ರಾಫಿಕ್ಸ್ ಮಾಡಿಸಬಹುದು. ಹೀಗಾಗಿ ನನ್ನನ್ನು ಯಾರೂ ಬ್ಲ್ಯಾಕ್ ಮೇಲ್ ಮಾಡಲು ಸಾಧ್ಯವಿಲ್ಲ, ನಾನು ಬ್ಲ್ಯಾಕ್ ಮೇಲ್ ಖೆಡ್ಡಾಗೆ ಬೀಳುವುದಿಲ್ಲ. ಇನ್ನೂ ನನ್ನ‌ ಮೇಲೆ‌ ಆರೋಪ ಮಾಡುವವರು ಆತ್ಮಾವಲೋಕನ ಮಾಡಿಕೊಳ್ಳಲಿ. ಜೊತೆಗೆ ಜೀವನದಲ್ಲಿ ಅವರು ಏನು ಮಾಡಿದ್ದಾರೆ ಯೋಚಿಸಲಿ ಎಂದು ಕೆಂಡ ಕಾರಿದ್ದಾರೆ.

ನಾನು ಅಂದೂಂಮ್ಮೆ ತಪ್ಪು ಮಾಡಿದ್ದೆ, ಆ ತಪ್ಪಿನಿಂದ ನಾನು ಪಾಠ ಕೂಡ ಕಲಿತಿದ್ದೇನೆ. ಇನ್ನೂ ನಡೆಯುವ ಮನುಷ್ಯ ಎಡವುದು ಸಹಜ, ಹೀಗಾಗಿ ಮತ್ತೆಂದೂ ಆ ತಪ್ಪುಗಳನ್ನು ನಾನು ಮಾಡಿಲ್ಲ. ಎಂದಿದ್ದಾರೆ ರೇಣುಕಾಚಾರ್ಯ ಇನ್ನೂ ನೀಚಮಟ್ಟದ, ಕೀಳುಮಟ್ಟದ ರಾಜಕಾರಣವನ್ನು ಯಾರೂ ಕ್ಷಮಿಸಲ್ಲ ಎಂದಿದ್ದಾರೆ. ಜೊತೆಗೆ ಕೋರ್ಟ್ನಿಂದ ತಡೆಯಾಜ್ಞೆಯನ್ನು ತಂದ ಶಾಸಕರಿಗೆ ಮಂತ್ರಿಗಿರಿ ಬೇಡ ಎಂದು BJP ಗೆ RSS ಸೂಚನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಂಪುಟ ರಚನೆ ಸಿಎಂ ಪರಮಾಧಿಕಾರ. ಮುಖ್ಯಮಂತ್ರಿಗೆ ನಾನು ಮನವಿ ಮಾಡಿದ್ದೇನೆ ಎಂದರು


ಬಿ.ಎಸ್.ಯಡಿಯೂರಪ್ಪನವರ ಪರವಾಗಿ ಬ್ಯಾಟ್ ಬೀಸಿದ ರೇಣುಕಾಚಾರ್ಯ, ಯಡಿಯೂರಪ್ಪನವರ ಸಾಮರ್ಥ್ಯ, ನಾಯಕತ್ವ ಹೋರಾಟ ದೊಡ್ಡದು. ನೂರಾರು ಪಾದಯಾತ್ರೆ, ಸಾವಿರಾರು ಹೋರಾಟವನ್ನು ಬಿ.ಎಸ್.ವೈ ಮಾಡಿದ್ದಾರೆ. ಜೊತೆಗೆ ಅನೇಕ ಬಾರಿ ಜೈಲಿಗೆ ಹೋದ್ರು, ಇನ್ನೂ BJPಗೆ ಯಡಿಯೂರಪ್ಪ ಬಗ್ಗೆ ಅಪಾರ ಗೌರವ ಇದೆ ಎನ್ನುವ ಮೂಲಕ ಯತ್ನಾಳ ಅವರಿಗೆ ಟಾಂಗ ನೀಡಿದ್ರು. ಇನ್ನೂ ಬಿ.ಎಸ್.ಯಡಿಯೂರಪ್ಪನವರ ಹೋರಾಟದ ಶ್ರಮ BJP ಅಧಿಕಾರಕ್ಕೆ ಬಂದಿದೆ ಇನ್ನೂ ಇಬ್ಬರು ಶಾಸಕರಿದ್ದಾಗ ಬಿ.ಎಸ್.ಯಡಿಯೂರಪ್ಪ ಯೋಚಿಸಲಿಲ್ಲ, ಈಗ ೧೨೦ ಸಂಖ್ಯೆ ತಲುಪಿದೆ.

ಯಡಿಯೂರಪ್ಪ ಕೈಕಾಲು ಹಿಡಿದು ಯತ್ನಾಳ್ ಪಕ್ಷಕ್ಕೆ ಬಂದಿದ್ದಾರೆ. ಜೊತೆಗೆ ರಾಷ್ಟ್ರೀಯ ನಾಯಕರಿಗೆ ಗೌರವಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಇನ್ನೂ ಯಡಿಯೂರಪ್ಪ ಮೋಜು ಮಸ್ತಿಗಾಗಿ ಅಧಿಕಾರದಲ್ಲಿ ಇರಲಿಲ್ಲ. ಹೈಕಮಾಂಡ್ ಹಾಗೂ ಸಂಘ ಪರಿವಾರದವರು ಯಡಿಯೂರಪ್ಪ ಅವರನ್ನು ಶ್ಲಾಘಿಸಿದ್ದಾರೆ. ಜೊತೆಗೆ ಯಡಿಯೂರಪ್ಪ ಬಗ್ಗೆ ಮಾತನಾಡುವುದು ಎಷ್ಟು ಸೂಕ್ತವಲ್ಲ ಎಂದು ಯತ್ನಾಳ್ ವಿರುದ್ಧ ರೇಣುಕಾಚಾರ್ಯ ಕೆಂಡ ಕಾರಿದ್ದಾರೆ.

error: Content is protected !!