ಕೂಗು ನಿಮ್ಮದು ಧ್ವನಿ ನಮ್ಮದು

ಹೈಕಮಾಂಡ್ ತೀರ್ಮಾನವೇ ಅಂತಿಮ: ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ

ನಾಯಕತ್ವದ ವಿಚಾರವಾಗಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ತೀರ್ಮಾನ, ಈ ನಿರ್ಧಾರಕ್ಕೆ ನಾನು ತಲೆಬಾಗುತ್ತೇನೆಂದು BJP ಶಾಸಕ ಹಾಗೂ ಸಿಎಂ ಬಿ.ಎಸ್ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿಯಾದ M.P ರೇಣುಕಾಚಾರ್ಯನವರು ರವಿವಾರ ತಮ್ಮ ಹೇಳಿಕೆಯನ್ನು ಹೇಳಿದ್ರು. ಇನ್ನೂ
ದಾವಣಗೆರೆಯ ನಾಯಕತ್ವದ ವಿಷಯಕ್ಕೆ ಸಂಬಂಧ ಪಟ್ಟ ವಿಚಾರಗಳನ್ನು ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಆ ತೀರ್ಮಾನವೇ ಅಂತಿಮವಾಗಿದ್ದು, ಇನ್ನೂ ಈ ನಿರ್ಧಾರಕ್ಕೆ ನಾನು ತಲೆಬಾಗುತ್ತೇನೆಂದು BJP ಶಾಸಕ ಮತ್ತು ಸಿಎಂ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿಯಾದ M.P ರೇಣುಕಾಚಾರ್ಯ ಅವರು ರವಿವಾರ ಹೇಳಿದ್ರು.

ಇನ್ನೂ ಹೊನ್ನಾಳಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆದ್ರೆ, ಅವಕಾಶ ನೀಡಿದ್ರೆ, ಉತ್ತಮವಾಗಿ ಕೆಲಸ ಮಾಡುತ್ತೇನೆ. ಜೊತೆಗೆ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವನ್ನು ನಾನು ಮತ್ತು ನಮ್ಮ ಎಲ್ಲಾ ಶಾಸಕರು ಪಾಲಿಸುತ್ತೇವೆ. ಜೊತೆಗೆ ಪ್ರಸ್ತುತ ಸಿಎಂ ಮತ್ತು ಕೇಂದ್ರೀಯ ನಾಯಕರ ನಡುವೆ ಯಾವುದೇ ರೀತಿಯ ಮಾತುಕತೆಗಳೂ ನಡೆದಿರುವ ಬಗ್ಗೆ ನನಗೆ ಯಾವ ಮಾಹಿತಿಯು ಇಲ್ಲ ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಹಾಗೆಂದು ನನಗೆ ಸಾಮರ್ಥ್ಯವಿಲ್ಲ ಎಂದಲ್ಲ. ಸಚಿವ ಸ್ಥಾನ ನಿಭಾಯಿಸುವ ಸಾಮರ್ಥ್ಯ ನನಗೂ ಇದೆ. ರಾಷ್ಟ್ರೀಯ ನಾಯಕರು ಏನು ತೀರ್ಮಾನ ಮಾಡುತ್ತಾರೋ ಕಾದು ನೋಡೋಣ ಎಂದು ತಿಳಿಸಿದ್ದಾರೆ. ಮೂರು ಬಾರೀ ಶಾಸಕನಾಗಿದ್ದೇನೆ ನನಗೆ ಕ್ಷೇತ್ರ ಜನರು ಮುಖ್ಯ, ಹಾಗಾಗಿ ನಾನು ದೆಹಲಿಯಿಂದ ನೇರವಾಗಿ ಕ್ಷೇತ್ರಕ್ಕೆ ಬಂದು ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿದ್ದೇನೆ ಎಂದ ರೇಣುಕಾಚಾರ್ಯ, ನಿಗಮದ ಅಧ್ಯಕ್ಷನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ ಎಂದಿದ್ದಾರೆ.

error: Content is protected !!