ಕೂಗು ನಿಮ್ಮದು ಧ್ವನಿ ನಮ್ಮದು

LPG ಸಿಲಿಂಡರ್ ಬೆಲೆಯಲ್ಲಿ ಭಾರೀ ಕಡಿತ

ಎಲ್‌ಪಿಜಿ ಸಿಲಿಂಡರ್ ಬೆಲೆ: ಗ್ರಾಹಕರಿಗೆ ಸೆಪ್ಟೆಂಬರ್ ತಿಂಗಳ ಮೊದಲೇ ದಿನವೇ ಶುಭ ಸುದ್ದಿ ದೊರೆತಿದೆ. ತಿಂಗಳ ಮೊದಲ ದಿನವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಈ ಬಾರಿ ಎಲ್‌ಪಿಜಿ ಸಿಲಿಂಡರ್ ದರ 91.5 ರೂಪಾಯಿ ಇಳಿಕೆಯಾಗಿದೆ. ಸೆಪ್ಟೆಂಬರ್ ಒಂದರಂದು ಇಂಡಿಯನ್ ಆಯಿಲ್ ಬಿಡುಗಡೆ ಮಾಡಿದ ಬೆಲೆಗಳ ಪ್ರಕಾರ, ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ದರ 91.50 ರೂ.ಗಳಷ್ಟು ಕಡಿಮೆ ಆಗಿದ್ದು, ಇಂದಿನಿಂದ ಸಿಲಿಂಡರ್ ಗೆ 1976.50 ರೂ.ಗಳ ಬದಲಿಗೆ 1885 ರೂ. ಪಾವತಿಸಬೇಕಾಗುತ್ತದೆ.

ಮೇ ತಿಂಗಳಲ್ಲಿ ದಾಖಲೆಯ 2354 ರೂ.ಗೆ ತಲುಪಿದ್ದ 19 ಕೆಜಿ ಸಿಲಿಂಡರ್ ದೆಹಲಿಯಲ್ಲಿ 1885 ಆಗಿ ಮಾರ್ಪಟ್ಟಿದೆ. ರಾಜಧಾನಿ ದೆಹಲಿಯಲ್ಲಿ ಈಗ 1976.50ರ ಬದಲಾಗಿ 1885 ರೂ.ಗಳಲ್ಲಿ ವಾಣಿಜ್ಯ ಸಿಲಿಂಡರ್ ಖರೀದಿಸಬಹುದಾಗಿದೆ. ಅದೇ ರೀತಿ ಕೋಲ್ಕತ್ತಾದಲ್ಲಿ 2095.50 ಬದಲಿಗೆ 1995.50, ಮುಂಬೈನಲ್ಲಿ 1936.50 ಬದಲಿಗೆ 1844 ರೂ. ಮತ್ತು ಮತ್ತು ಚೆನ್ನೈನಲ್ಲಿ 2141 ಬದಲಿಗೆ 2045 ರೂ. ಪಾವತಿಸಬೇಕಾಗಿದೆ. ಇದೇ ವೇಳೆ 14.2 ಕೆಜಿ ಗ್ಯಾಸ್ ಸಿಲಿಂಡರ್ 1053 ರೂಪಾಯಿಗಳಿಗೆ ಲಭ್ಯವಾಗಲಿದೆ.

ಗಮನಾರ್ಹವಾಗಿ, ಸತತ ಐದನೇ ಬಾರಿಗೆ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆಯಾಗಿದೆ. 19 ಮೇ 2022 ರಂದು ರೂ 2354 ರ ದಾಖಲೆಯ ಬೆಲೆಯನ್ನು ತಲುಪಿದ ಗ್ಯಾಸ್ ಸಿಲಿಂಡರ್ ಜೂನ್ 1 ರಂದು ರೂ 2219 ರಷ್ಟಿತ್ತು. ಒಂದು ತಿಂಗಳ ನಂತರ, ಸಿಲಿಂಡರ್ ಬೆಲೆ 98 ರೂ ಕಡಿಮೆಯಾಯಿತು ಮತ್ತು ಅದು 2021 ರೂ ಆಯಿತು. ಜುಲೈ 6 ರಂದು ತೈಲ ಕಂಪನಿಗಳು ಈ ಸಿಲಿಂಡರ್ ಬೆಲೆಯನ್ನು 2012.50 ರೂ. ಗಳಿಗೆ ನಿಗದಿಗೊಳಿಸಿತು. ಆಗಸ್ಟ್ 1 ರಿಂದ ಈ ಸಿಲಿಂಡರ್ 1976.50 ರೂ. ಗಳಿಗೆ ಲಭ್ಯವಾಗುತ್ತಿತ್ತು. ಇದೀಗ 01 ಸೆಪ್ಟೆಂಬರ್ 2022ರಿಂದ 1,885 ರೂ.ಗಳಿಗೆ ವಾಣಿಜ್ಯ ಸಿಲಿಂಡರ್ ಲಭ್ಯವಾಗಲಿದೆ. ಒಟ್ಟಾರೆಯಾಗಿ ನಿರಂತರ ಬೆಲೆ ಕುಸಿತದಿಂದಾಗಿ ಹಣದುಬ್ಬರದಿಂದ ಬೇಸತ್ತಿದ್ದ ಜನಸಾಮಾನ್ಯರಿಗೆ ನೆಮ್ಮದಿ ಸಿಕ್ಕಂತಾಗಿದೆ.

ಪ್ರತಿ ಸಿಲಿಂಡರ್‌ಗೆ 200 ರೂಪಾಯಿ ಸಬ್ಸಿಡಿ:
ಕಳೆದ ದಿನಗಳಲ್ಲಿ, ಹಣದುಬ್ಬರದಿಂದ ಸಾರ್ವಜನಿಕರಿಗೆ ಪರಿಹಾರ ನೀಡಲು ಉಜ್ವಲ ಯೋಜನೆಯಡಿ ಸರ್ಕಾರವು ಪ್ರತಿ ಸಿಲಿಂಡರ್‌ಗೆ 200 ರೂಪಾಯಿ ಸಬ್ಸಿಡಿ ಘೋಷಿಸಿತ್ತು. ಈ ಸಬ್ಸಿಡಿ ವಾರ್ಷಿಕವಾಗಿ 12 ಸಿಲಿಂಡರ್‌ಗಳವರೆಗೆ ಮಾತ್ರ ಲಭ್ಯವಿರುತ್ತದೆ. ಸರ್ಕಾರದ ಈ ಕ್ರಮದಿಂದ 9 ಕೋಟಿಗೂ ಹೆಚ್ಚು ಗ್ರಾಹಕರು ಪ್ರಯೋಜನ ಲಭ್ಯವಾಗಲಿದೆ.

error: Content is protected !!