ಬೆಳಗಾವಿ: ಸಾಂಬ್ರಾ ಗ್ರಾಮದಲ್ಲಿ ಸಿದ್ದಕಲಾ ಸೋಶಿಯಲ್ ಹಾಗೂ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ, ಲಕ್ಷ್ಮೀ ತಾಯಿ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಗ್ರಾಮೀಣ ಭಾಗದವರಿಗೆ ಭಾನುವಾರ ಆಯೋಜಿಸಲಾಗಿದ್ದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿದರು.
ಒಟ್ಟು 32 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಉದ್ಘಾಟನೆ ಕಾರ್ಯಕ್ರಮದ ಸಂದರ್ಭದಲ್ಲಿ ಬಂದವರಿಗೆಲ್ಲ ಗಿಡಗಳನ್ನು ನೀಡಿ ಪರಿಸರ ಜಾಗ್ರತಿ ಮೂಡಿಸುವ ಕೆಲಸವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರು, ನಾಗೇಶ ದೇಸಾಯಿ, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷರು, ಸರ್ವಸದಸ್ಯರು, ಗಣೇಶ, ಸುನಿಲ್ ಅಷ್ಟೇಕರ್, ಈರಪ್ಪ ಸುಳೇಭಾವಿ, ಬಾಗಣ್ಣ ಸನದಿ, ರಾಮಚಂದ್ರ ದೇಸಾಯಿ, ಮುತಗಾ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಚಂದ್ರ ಪಾಟೀಲ, ಸುಳೇಭಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ, ಮಾಜಿ ತಾಲೂಕ ಪಂಚಾಯತ್ ಸದಸ್ಯರಾದ ಕಾಶಣ್ಣ ಧರ್ಮೋಜಿ, ನಿಲೇಶ ಚಂದಗಡ್ಕರ್, ಮೋಹನ್ ಜೋಹಿ, ಸದಾಶಿವ ಪಾಟೀಲ, ಗುರುನಾಥ್ ಅಷ್ಟೇಕರ್, ಮಹೇಂದ್ರ ಗೋಟೆ, ಬಾಹುಕಣ್ಣ ಬಸರೀಕಟ್ಟಿ, ಏಕನಾಥ್ ಸನದಿ, ಸಿದ್ದಕಲಾ ಸೋಶಿಯಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ನ ಎಲ್ಲ ಪದಾಧಿಕಾರಿಗಳು, ಕಲ್ಲಪ್ಪ ಪಾಲ್ಕರ್, ಸಿಮೆಂಟ್ ವ್ಯಾಪಾರಿ ಸಂಜಯ ಪಾಟೀಲ, ಲಕ್ಷ್ಮಣ ಸುಳೇಭಾವಿ, ಭರಮಾ ಚಿಂಗಳೆ, ಬಸಗೌಡ ದೇಸಾಯಿ, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮದ ಜನರು ಉಪಸ್ಥಿತರಿದ್ದರು.