ಹಿರೇಬಾಗೇವಾಡಿ: ಹಿರೇಬಾಗೇವಾಡಿ ಗ್ರಾಮದ ಪೇಟೆ ಓಣಿಯ ವಿನಾಯಕ ಗೆಳೆಯರ ಬಳಗದವರು ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಪಡಿಬಸವೇಶ್ವರ ಪಲ್ಲಕ್ಕಿಯನ್ನು ತೆಗೆದುಕೊಂಡು ಶ್ರೀ ಉಳವಿಯ ಕ್ಷೇತ್ರಕ್ಕೆ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ.
ಇವತ್ತು ಗೆಜಪತಿ ಗ್ರಾಮದ ಮುಖಾಂತರ ತೆರಳುವ ಸಮಯದಲ್ಲಿ ಹರ್ಷ ಶುಗರ್ ಫ್ಯಾಕ್ಟರಿ ಚೇರಮನ್ ಚನ್ನರಾಜ ಹಟ್ಟಿಹೊಳಿ ಪಲ್ಲಕ್ಕಿಯ ಪೂಜೆಯನ್ನು ನೆರವೇರಿಸಿ, ಸ್ವಲ್ಪ ದೂರ ಹೊತ್ತು ಸಾಗಿದರು. ಜೊತೆಗೆ ಅನ್ನಪ್ರಸಾದಕ್ಕೆ ದೇಣಿಗೆಯನ್ನು ನೀಡಿದರು. ಉಳವಿ ಕ್ಷೇತ್ರಕ್ಕೆ ಪಾದಯಾತ್ರೆಯನ್ನು ಕೈಗೊಂಡಿರುವ ಎಲ್ಲ ಭಕ್ತಾಧಿಗಳಿಗೆ ಶುಭವಾಗಲೆಂದು ಅವರು ಪ್ರಾರ್ಥಿಸಿ, ಹಾರೈಸಿದರು.
ಈ ಸಂದರ್ಭದಲ್ಲಿ ಭಕ್ತಾಧಿಗಳು, ಗ್ರಾಮದ ಮುಖಂಡರಾದ ಅಡಿವೇಶ ಇಟಗಿ, ಸುರೇಶ ಇಟಗಿ, ಆನಂದ ಪಾಟೀಲ, ರಾಜು ಮೇಳೆದ, ಸಿದ್ದಣ್ಣ ಹಾವಣ್ಣವರ ಮುಂತಾದವರು ಉಪಸ್ಥಿತರಿದ್ದರು.