ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಕ್ಕಿನಕೇರಿ ಗ್ರಾಮದ ಶ್ರೀ ಲಕ್ಷ್ಮೀ ದೇವಸ್ಥಾನದ ಮುಖ್ಯ ದ್ವಾರದ ಅಳವಡಿಕೆಗೆ (ಚೌಕಟ್ಟು) ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸೋಮವಾರ ಪೂಜೆ ನೆರವೇರಿಸಿದರು.
ದೇವಸ್ಥಾನದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಲಕ್ಷ್ಮಿ ಹೆಬ್ಬಾಳಕರ್ ಸ್ವಂತ 2 ಲಕ್ಷ ರೂ, ಹಾಗೂ ಶಾಸಕರ ನಿಧಿಯ ವತಿಯಿಂದ 6 ಲಕ್ಷ ರೂ,ಗಳ ನೆರವು ನೀಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನ ಪ್ರತಿನಿಧಿಗಳು, ಗ್ರಾಮಸ್ಥರು, ಸುಮಾರು ಐವತ್ತಕ್ಕೂ ಅಧಿಕ ಮಾಜಿ ಸೈನಿಕರು, ಡಾ. ನಿರಂಜನ ಕದಮ್, ಶಿವಾಜಿ ಬೊಗನ್, ಶಿವಾಜಿ ಪಾಟೀಲ, ದೇವಸ್ಥಾನದ ಕಮೀಟಿಯವರು, ಪಕ್ಷದ ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.