ಬೆಳಗಾವಿ: “ಶಾಸಕಿಯಾದಾಗಿನಿಂದ ಅಭಿವೃದ್ಧಿಯೇ ನನ್ನ ಮೂಲಮಂತ್ರವಾಗಿಸಿಕೊಂಡಿದ್ದೇನೆ. ಸಮಗ್ರ ಅಭಿವೃದ್ಧಿ ಕಾರ್ಯಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದೇನೆ,” ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳಗಾ (ವೈ) ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಅರಿಶಿಣ ಕುಂಕುಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಾಮದ ಅಭಿವೃದ್ಧಿ ಕೆಲಸಗಳ ಅವಲೋಕನ ನಡೆಸಿದರು. “ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದಗಳ ಮೂಲಕ ನಿಮ್ಮೆಲ್ಲರ ಸೇವೆ ಮಾಡುವ ಸದವಕಾಶವನ್ನು ನನಗೆ ಕೊಟ್ಟಿದ್ದೀರಿ, ಅದರಂತೆ ಯಾವುದೇ ಕ್ಷಣದಲ್ಲೂ ಚ್ಯುತಿ ಬಾರದಂತೆ ನಡೆದುಕೊಂಡಿದ್ದೇನೆ,” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವರಾಜ ಕದಂ, ರೂಪಾ ಪಾಟೀಲ, ಲಕ್ಷ್ಮೀ ಲೋಹಾರ, ಯಮುನಾ ಪಾಟೀಲ, ಲಕ್ಷ್ಮೀ ಪಾಟೀಲ, ಭಾರತಿ ಪಾಟೀಲ, ರೇಖಾ ಯಾದವ್, ಪದ್ಮಾ ಪಾಟೀಲ, ಜ್ಯೋತಿ ಟಕ್ಕೆಕರ್, ಸುರೇಖಾ ಪಾಟೀಲ, ಧನಶ್ರೀ ಪಾಟೀಲ, ಗಾಯತ್ರಿ ಬಸ್ತವಾಡಕರ್, ಅನಿತಾ ಕುಕಡೋಳ್ಕರ್, ರೇಖಾ ಪಾಟೀಲ, ಲಕ್ಷ್ಮೀ ಕುಕಡೋಳ್ಕರ್, ಮಿಲನ ಕಂಗ್ರಾಳಕರ್, ಕವಿತಾ ಲೋಹಾರ್, ರೇಣುಕಾ ಪಾಟೀಲ, ನೇಹಾ ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.