ಬೆಳಗಾವಿ – ಹಿರೇ ಬಾಗೇವಾಡಿ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡದ ಕಾಮಗಾರಿಗಳಿಗೆ ಸ್ಥಳೀಯ ಜನಪ್ರತಿನಿಧಿಗಳು ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವಿಶೇಷ ಪ್ರಯತ್ನದಿಂದಾಗಿ ಲೋಕೋಪಯೋಗಿ ಇಲಾಖೆಯು ಒಟ್ಟು13 ಲಕ್ಷ ರೂ,ಗಳ ಅನುದಾನ ಒದಗಿಸಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಸಿ ಪಾಟೀಲ, ಗ್ರಾಮದ ಹಿರಿಯರು, ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ವಾತಿ ಇಟಗಿ, ಉಪಾಧ್ಯಕ್ಷ ನಾಜರಿನ್ ಕರಿದಾವಲ್, ಗೌಸಮೊದ್ದಿನ ಜಾಲಿಕೊಪ್ಪ, ಸುರೇಶ ಇಟಗಿ, ಆನಂದ ಪಾಟೀಲ, ಅಶೋಕ ಬೆನಕಟ್ಟಿ, ಸಮರಿನ್ ದೇವಲಾಪೂರ, ಅಡಿವೇಶ ಇಟಗಿ, ಹಸೀನಾ ಬಾನು ಅದರಂಗಿ, ಅಬ್ದುಲ್ ಕರೀಮ್, ಇಮ್ತಿಯಾಜ್ ಕರಿದಾವಲ್ ಅಂಗನವಾಡಿ ಸಿಬ್ಬಂದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.