ಕೂಗು ನಿಮ್ಮದು ಧ್ವನಿ ನಮ್ಮದು

ಝಾಪಾಗಳನ್ನ ಜಾಡಿಸಿದ ಸವದಿ: ಆನೆ ಹೋಗುವಾಗ ನಾಯಿ ಬೋಗಳಿದ್ರೆ ಏನು ಮಾಡಲು ಆಗೊಲ್ಲ

ಬೆಳಗಾವಿ: ನಾಡದ್ರೋಹಿ ಮಹಾರಾಷ್ಟ್ರ ಏಕಿಕರಣ ಸಮಿತಿ ಹಾಗೂ ಮಹಾರಾಷ್ಟ್ರ ಸಚಿವರ ವಿರುದ್ದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವಾಗ್ದಾಳಿ ನಡೆಸಿದ್ದಾರೆ. ನವೆಂಬರ್ 1 ರಂದು ಆಚರಿಸಲಾಗುವ ಅದ್ದೂರಿ ಕನ್ನಡ ರಾಜ್ಯೋತ್ಸವ ದಿನ ಮಹಾರಾಷ್ಟ್ರ ಸಚಿವರಿಂದ ಕಪ್ಪು ಬಟ್ಟಿ ಧರಿಸಲು ಮಾಡಿದ ನಿರ್ಧಾರಕ್ಕೆ ಸವದಿ ಕೆಂಡಾಮಂಡಲರಾಗಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಸಚಿವ ಲಕ್ಷ್ಮಣ ಸವದಿ, ಯಾರೇ ಕೂಗಾಡಲಿ, ಯಾರೇ ಹಾರಾಡಲಿ ಬೆಳಗಾವಿ ನಮ್ಮದೆ. ಸೂರ್ಯ, ಚಂದ್ರ ಇರೋ ವರೆಗೂ ಬೆಳಗಾವಿ ನಮ್ಮದೆ. ಮಹಾರಾಷ್ಟ್ರ ನಾಯಕರು ಏನೆ ಹೇಳಿದ್ರು ಅವರ ಆಟ ನಡೆಯಲ್ಲ. ತಮ್ಮ ತೀಟೆ ತೀರಿಸಿಕೊಳ್ಳಲು ಕೆಲವು ನಾಯಕರು ಮಾತನಾಡುತ್ತಾರೆ ಎಂದು ಝಾಪಾಗಳನ್ನ ಜಾಡಿಸಿದ್ದಾರೆ. ಅಲ್ಲದೇ ಕಾನೂನು ಚೌಕಟ್ಟು ಮೀರಿದರೆ ಕಠಿಣ ಕ್ರಮ ಕೈಗೊಳ್ತಿವಿ ಎಂದ ಸವದಿ ಬೆಳಗಾವಿಗೆ ಬಂದು ಹೇಳಿದ್ರೆ ತಕ್ಕ ಉತ್ತರ ನೀಡುತ್ತೇವೆ. ಮಹಾರಾಷ್ಟ್ರದಲ್ಲಿ ಯಾವುದೇ ಸರ್ಕಾರ ಇದ್ದಾಗ ಈ ರೀತಿಯ ಖ್ಯಾತೆ ತೆಗಿತಾರೆ.
ಆನೆ ಹೋಗುವಾಗ ನಾಯಿ ಬೋಗಳಿದ್ರೆ ಏನು ಮಾಡಲು ಆಗೊಲ್ಲ ಎನ್ನುವ ಮೂಲಕ ನಾಡದ್ರೋಹಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

error: Content is protected !!