ಕೂಗು ನಿಮ್ಮದು ಧ್ವನಿ ನಮ್ಮದು

ನನಗೆ ಮಂತ್ರಿ ಆಗದೇ ಇರುವದಕ್ಕೆ ಬೇಸರವಿಲ್ಲ: ಲಕ್ಷ್ಮಣ ಸವದಿ

ಚಿಕ್ಕೋಡಿ: ನನಗೆ ಮಂತ್ರಿ ಆಗದೇ ಇರುವುದಕ್ಕೆ ಬೇಜಾರಿಲ್ಲ ಎಂದು ಹೇಳಿ ಮಾಜಿ DCM ಲಕ್ಷ್ಮಣ ಸವದಿಯವರು ನೂತನ ಸಚಿವ ಸಂಪುಟಕ್ಕೆ ಶುಭ ಹಾರೈಸಿದ್ದಾರೆ. ಇನ್ನೂ ಸಂಪುಟ ರಚನೆಯ ನಂತರ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಸ್ವಗೃಹದಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಸವದಿ ಅವರು, ಸಚಿವ ಸಂಪುಟದಿಂದ ಕೈ ಬಿಟ್ಟ ಬಗ್ಗೆ ಬೆಂಬಲಿಗರಲ್ಲಿನ ಪ್ರತಿಭಟನೆ ಮತ್ತು ಆಗ್ರಹಗಳು, ಅಭಿಮಾನಿಗಳು ಮತ್ತು ಅವರವರ ಮುಖಂಡರ ನಡುವಿನ ಸಂಬಂಧದ ಅನುಗುಣವಾಗಿ ಇರುತ್ತದೆ. ಜೊತೆಗೆ ಸೋತಂತಹ ವ್ಯಕ್ತಿಯನ್ನು DCM ಮಾಡಿದ್ರು.

ಹಾಗೆಯೇ ಹೆಚ್ಚಿನ ಜವಾಬ್ದಾರಿ ನೀಡುವ ಮೂಲಕ ಉತ್ತಮ ಅವಕಾಶಗಳನ್ನು ನನಗೆ ಕೊಟ್ಟಿದ್ದಾರೆ. ಇನ್ನೂ ಕೆಲವೊಂದು ಸಾರಿ ಮತ್ತೊಬ್ಬರಿಗೆ ಅವಕಾಶ ಕೊಡುವುದಕ್ಕಾಗಿ ಅವಧಿ ಆಧಾರಿತ ಖಾತೆ ಹಂಚಿಕೆಯನ್ನು ಪಕ್ಷದ ವರಿಷ್ಟರು ಮಾಡಿದ್ದಾರೆ. ಜೊತೆಗೆ ರಾಜ್ಯದ ಸಚಿವ ಸಂಪುಟದಲ್ಲಿ ೩೩ ಖಾತೆಗಳಿವೆ, ಒಬ್ಬರು ಸಿಎಂ ಆಗುತ್ತಾರೆ. ಇನ್ನೂ ಸಿಎಂ ಆಗದೇ ಇರುವದಕ್ಕೆ ನನಗೆ ಯಾವುದೇ ಬೇಜಾರಿಲ್ಲ ಎಂದು ಸವದಿ ಅವರು ಹೇಳಿದ್ದಾರೆ. ಜೊತೆಗೆ ಉತ್ತರ ಕರ್ನಾಟಕದವರಾದ ಜೊತೆಗೆ ನನ್ನ ಆತ್ಮೀಯರಾದ ಬಸವರಾಜ ಬೊಮ್ಮಾಯಿಯವರು ಈಗ ನೂತನ ಸಿಎಂ ಆಗಿದ್ದಾರೆ. ಇವರಿಂದ ವಿಶೇಷವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ಆಗುತ್ತದೆ ಎಂಬ ಆಶಯ ನನಗಿದೆ. ಇನ್ನೂ ಉಳಿದ ೨೦ ತಿಂಗಳಲ್ಲಿ ಉತ್ತಮ ಯೋಜನೆಗಳನ್ನು ಕೊಡಲಿದ್ದೇವೆ.

ಅದರ ಜೊತೆಗೆ ಕೋವಿಡ್ ಹೆಮ್ಮಾರಿ , ಪ್ರವಾಹ ಸೇರಿದಂತೆ ಕೆಲವು ಕಂಟಕಗಳಿಂದ ಸ್ವಲ್ಪ ಕೆಲಸಗಳು ವಿಳಂಬವಾಗಿವೆ. ಇನ್ನೂ ಈ ಬಾರಿಯ ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ಖಾತೆಗಳನ್ನು ಬ್ಯಾಲೆನ್ಸ್ ಆಗಿ ಮಾಡಿದ್ದಾರೆ. ಜೊತೆಗೆ ಉತ್ತರ ಕರ್ನಾಟಕದ ಜನರಿಗೆ ಒಳ್ಳೆಯ ಖಾತೆ ಕೊಟ್ಟು ಬ್ಯಾಲೆನ್ಸ್ ಮಾಡಿ ಜಾಣತನವನ್ನು ಮೆರೆದಿದ್ದಾರೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ರು.

ಇನ್ನೂ ಈ ಚುನಾವಣೆಯಲ್ಲಿ ಮತ್ತೆ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪವನ್ನು ನಾವೆಲ್ಲ ಮಾಡಿದ್ದೇವೆ. ಜೊತೆಗೆ ಮುಂದೆ ಬರುವ ದಿನಗಳಲ್ಲಿ ಉತ್ತಮ ಅವಕಾಶಗಳು ಬರುತ್ತವೆ. ಹಾಗಾಗಿ ನಮ್ಮ ಅಭಿಮಾನಿಗಳು ಮತ್ತು ಕಾರ್ಯಕರ್ತರು ಯಾವುದೇ ರೀತಿ ಧೃತಿಗೆಡಬಾರದು. ಎಂದು ಸವದಿಯವರು ಹೇಳಿದ್ರು. ಜೊತೆಗೆ ನಾನು ನನ್ನ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರಿಗೆ ಮನವಿಯನ್ನು ಮಾಡುತ್ತೇನೆ. ಯಾವುದೇ ರೀತಿಯ ಪಕ್ಷ ವಿರೋಧಿ, ಚಟುವಟಿಕೆ ಮತ್ತು ಪ್ರತಿಭಟನೆ ಮಾಡದೇ ಪಕ್ಷ ಸಂಘಟನೆಗೆ ಒತ್ತು ಕೊಡಲು ಕೈ ಜೋಡಿಸಬೇಕೆಂದು ಎಂದು ಸವದಿ ಅವರು ತಿಳಿಸಿದ್ರು.

error: Content is protected !!